ಈ ವರ್ಷ ನಡೆದ ಐಪಿಎಲ್ ಪಂದ್ಯದ ಫೈನಲ್ ಹಣಾಹಣೆ ನೆನಪಿರಬಹುದು. ಚೊಚ್ಚಲ ಬಾರಿ ಐಪಿಎಲ್ ನಲ್ಲಿ ಆಡಿದ ಗುಜರಾತ್ ಟೈಟಾನ್ಸ್ – ರಾಜಸ್ಥಾನ್ ರಾಯಲ್ಸ್ ನಡುವೆ ಫೈನಲ್ ಪಂದ್ಯ ನಡೆದಿತ್ತು.
ಈ ಪಂದ್ಯವನ್ನು ನೋಡಲು ಎಷ್ಟು ಜನರು ಲಕ್ಷಾಂತರ ಜನ ಸೇರಿದ್ದರು. ಈ ಲಕ್ಷಾಂತರ ಜನರಿಂದ ಅಹಮದಾಬಾದ್ ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂ ಈಗ ವಿಶ್ವದಾಖಲೆ ಬರೆದಿದೆ.
ಹೌದು, ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1 ಲಕ್ಷದ 10 ಸಾವಿರ ಪ್ರೇಕ್ಷಕರು ಸೇರುವ ಸಾಮಾರ್ಥ್ಯವಿದೆ. ಐಪಿಎಲ್ ಮ ಫೈನಲ್ ಪಂದ್ಯವನ್ನು ನೋಡಲು ಬರೋಬ್ಬರಿ 101,566 ಜನರು ನೆರೆದಿದ್ದರು. ಇದು ಟಿ20 ಕ್ರಿಕೆಟ್ ವೊಂದನ್ನು ನೋಡಲು ಅತೀ ಹೆಚ್ಚು ಜನ ಸೇರಿದ ಸ್ಟೇಡಿಯಂ ಎಂಬ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಪುಟಕ್ಕೆ ಸೇರಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ 90 ಸಾವಿರ ಜನರು ಸೇರುವ ಮೈದಾನವಿದೆ.
ನರೇಂದ್ರ ಮೋದಿ ಸ್ಟೇಡಿಯಂ ಗಿನ್ನಿಸ್ ರೆಕಾರ್ಡ್ ಪಡೆದುಕೊಂಡಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮೇ 29, 2022 ರಂದು ಭವ್ಯವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 101,566 ಜನರು ಐಪಿಎಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಇದೀಗ T20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಹಾಜರಾತಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ವೀಕರಿಸಲು ತುಂಬಾ ಸಂತೋಷವಾಗಿದೆ ಮತ್ತು ಹೆಮ್ಮೆಯಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ನಮ್ಮ ಅಭಿಮಾನಿಗಳಿಗೆ ದೊಡ್ಡ ಧನ್ಯವಾದಗಳೆಂದು ಟ್ವೀಟ್ ಮಾಡಿದ್ದಾರೆ.
ಈ ಮೈದಾನವನ್ನು ಸುಮಾರು 800 ಕೋಟಿ ಖರ್ಚಿನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಮೈದಾನಗಳಿವೆ. ಇದಲ್ಲದೆ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಮಾಡಿದ 11 ವಿಭಿನ್ನ ಪಿಚ್‌ಗಳನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ.

