ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದು, ಟೆಕ್ ದೈತ್ಯ ಎಂದೇ ಕರೆಸಿಕೊಳ್ಳುವ ಇನ್ಫೋಸಿಸ್ ನ ಮುಖ್ಯಸ್ಥರಾದ ನಾರಾಯಣ ಮೂರ್ತಿ ಹಾಗು ಸುಧಾ ಮೂರ್ತಿ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಅಪಾರ ಸಮಾಜಸ್ನೇಹಿ ಕೆಲಸಗಳು, ದಾನಧರ್ಮಗಳನ್ನ ಮಾಡಿಕೊಂಡು ಬಂದಿರುವ ಈ ದಂಪತಿ ಇಡೀ ಕರುನಾಡೇ, ಅಷ್ಟೇ ಯಾಕೆ ಇಡೀ ಪ್ರಪಂಚವೇ ಮೆಚ್ಚಿದ ದಂಪತಿ. ಸದ್ಯ ಇವರು ತಿರುಪತಿ ತಿಮ್ಮಪ್ಪನಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಸರಳತೆಯನ್ನ ಮೈಗೂಡಿಸಿಕೊಂಡಿರುವ ದಂಪತಿ ಇವರು. ಅದಕ್ಕೆ ಇವರನ್ನ ಜನರು ಬಹುವಾಗಿ ಮೆಚ್ಚುತ್ತಾರೆ ಎನ್ನಬಹುದು. ಜೊತೆಗೆ ಅಪಾರ ಧಾರ್ಮಿಕ, ಸಾಮಾಜಿಕ ಕೆಲಸಗಳನ್ನ ಮಾಡುತ್ತಲೇ ಇರುತ್ತಾರೆ. ಸದ್ಯ ಇವರು ತಿರುಪತಿ ಗಿರಿವಾಸ ಶ್ರೀ ಶಂಖಚಕ್ರಧಾರಿ ಶ್ರೀನಿವಾಸನಿಗೆ ಬಂಗಾರದ ಶಂಖವನ್ನ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ನಲವತ್ತೈದು ವರ್ಷಗಳ ಸುಧೀರ್ಘ, ಸುಂದರ ದಾಂಪತ್ಯ ಜೀವನದಲ್ಲಿ ತೆಗೆದುಕೊಂಡಂತಹ ಕೆಲವೇ ಕೆಲವು ಚಿನ್ನಾಭರಣಗಳನ್ನ ಹಾಕಿ ಈ ಬಂಗಾರದ ಶಂಖವನ್ನ ಮಾಡಲಾಗಿದೆಯಂತೆ. ಸದ್ಯ ಈ ಬಂಗಾರದ ಶಂಖವನ್ನ ತಿಮ್ಮಪ್ಪನಿಗೆ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.



