HomeSportsಕಿವೀಸ್ ವಿರುದ್ಧ ಕ್ಲೀನ್ ಸ್ವೀಪ್: ಏಕದಿನದಲ್ಲಿ ಟೀಮ್ ಇಂಡಿಯಾ ನಂ.1

ಕಿವೀಸ್ ವಿರುದ್ಧ ಕ್ಲೀನ್ ಸ್ವೀಪ್: ಏಕದಿನದಲ್ಲಿ ಟೀಮ್ ಇಂಡಿಯಾ ನಂ.1

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.


ಹೋಳ್ಕರ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ (101 ರನ್‌)) ಹಾಗೂ ಶುಭ್‌ಮನ್‌ ಗಿಲ್‌ (112 ರನ್‌) ಹಾಗೂ ಅಂತಿಮವಾಗಿ 54 ರನ್ ನಿಂದ 385 ರನ್ ಗಳಿಸಿತ್ತು.

ಪ್ರತಿಯಾಗಿ ನ್ಯೂಜಿಲೆಂಡ್‌ ತಂಡ ಡೆವೋನ್‌ ಕಾನ್ವೆ ಬಾರಿಸಿದ ಶತಕದ ಮೂಲಕ ಪ್ರತಿರೋಧ ತೋರಿತಾದರೂ ಶಾರ್ದೂಲ್‌ ಠಾಕೂರ್‌ (45 ರನ್‌ಗೆ 3 ವಿಕೆಟ್‌) ಹಾಗೂ ಕುಲದೀಪ್‌ ಯಾದವ್‌ (62 ರನ್‌ಗೆ 3 ವಿಕೆಟ್‌) ಮಾರಕ ದಾಳಿಯ ಬೆಂಡಾಗಿ 41.2 ಓವರ್‌ಗಳಲ್ಲಿ295 ರನ್‌ಗೆ ಆಲೌಟ್‌ ಆಯಿತು. 
ಈ ಸರಣಿ ಕ್ಲೀನ್ ಸ್ವೀಪ್ ‌ಮೂಲಕ ಟೀಮ್ ಏಕದಿನದಲ್ಲೂ‌ ನಂ.1 ಟೀಮ್ ಆಗಿ ಹೊರಹೊಮ್ಮಿದೆ. ಎರಡನೇ ಏಕದಿನ ಪಂದ್ಯದ ವೇಳೆ ಭಾರತ ಏಕದಿನ ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಇದೀಗ‌ ಮೂರನೇ ಏಕದಿನದಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಂಡ ಬಳಿಕ ಅಗ್ರಸ್ಥಾನದಲ್ಲಿನ ಇಂಗ್ಲೆಂಡ್ ಎರಡನೇ ಸ್ಥಾನಕ್ಕೆ ‌ಕುಸಿದು, ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

RELATED ARTICLES

Most Popular

Share via
Copy link
Powered by Social Snap