ಭಾರತ – ನ್ಯೂಜಿಲೆಂಡ್ ನಡುವಿನ ಮೂರನೇ ಟಿ-20 ಯಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಸರಣಿಯನ್ನು 2-1 ರ ಅಂತರದಿಂದ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭದಲ್ಲಿ ಇಶಾನ್ ಕಿಶನ್ ಅವರನ್ನು ಕಳೆದುಕೊಂಡಿತು. ಆದರೆ ಆ ಬಳಿಕ ರಾಹುಲ್ ತ್ರಿಪಾಠಿ ಬಿರುಸಿನಿಂದ 44 ರನ್ ಗಳಿಸಿ ಸೌಧಿ ಅವರಿಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ 24 ಗಳಿಸಿ ಔಟಾದರು.


ಆದರೆ ಕ್ರಿಸ್ ನಲ್ಲಿದ್ದ ಆರಂಭಿಕ ಶುಭ್ಮನ್ ಗಿಲ್ ಮಾತ್ರ ಕಿವೀಸ್ ಬೌಲರ್ ಗಳ ಬೆವರು ಇಳಿಸಿ, ಸುಸ್ತು ಮಾಡಿದರು. ಮೈದಾನದ ಎಲ್ಲಾ ಕಡೆ ಸಿಕ್ಸರ್, ಬೌಂಡರಿ ಗಳನ್ನು ಹೊಡೆದು ಶತಕದಾಟ ಆಡಿದರು 12 ಬೌಂಡರಿ, 7 ಸಿಕ್ಸರ್ ಗಳೊಂದಿಗೆ 126 ರನ್ ಗಳಿಸಿ ಔಟಾಗದೆ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಪೈಸಾ ವಸೂಲು ಆಟವನ್ನು ಆಡಿದರು.
ಅಂತಿಮವಾಗಿ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ, 235 ರ ಬೃಹತ್ ಗುರಿಯನ್ನು ಬಿಟ್ಟು ಕೊಟ್ಟಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಆರಂಭದಲ್ಲೇ
ಫಿನ್ ಅಲೆನ್(3 ರನ್), ಡೆವೊನ್ ಕಾನ್ವೇ(1 ರನ್), ಮಾರ್ಕ್ ಚಾಪ್ಮನ್,(0) ಗ್ಲೆನ್ ಫಿಲಿಪ್ಸ್,(2 ರನ್) ಡೇರಿಲ್ ಮಿಚೆಲ್(2) ಒಂದಾದ ಮೇಲೆ ಒಂದರಂತೆ ವಿಕೆಟ್ ಕಳೆದುಕೊಳ್ಳಯತ್ತಲ್ಲೇ ಹೋಯಿತು.
ವಿಕೆಟ್ ಉಳಿಸಿ, ಮೊತ್ತ ಬೆಳೆಸುವ ಆಟವನ್ನಾಡಬೇಕಿದ್ದ ಕಿವೀಸ್ ಬ್ಯಾಟರ್ ಗಳು ವಿಫಲರಾದರು.
ಮೈಕೆಲ್ ಬ್ರೇಸ್ವೆಲ್ (8) ಮಿಚೆಲ್ ಸ್ಯಾಂಟ್ನರ್ (13) ರನ್ ಗಳಿಸಿ ಔಟಾದರು.
ಅಂತಿಮವಾಗಿ ಟೀಮ್ ಇಂಡಿಯಾ 66 ರನ್ ಗೆ ಸರ್ವಪತನವಾಗಿ ಭಾರತಕ್ಕೆ ಶರಣಾಯಿತು.
ಟೀಮ್ ಇಂಡಿಯಾದ ಪರವಾಗಿ ಆರ್ಷ್ ದೀಪ್, ಶಿವಂ ಮಾವಿ ,ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ 4 ವಿಕೆಟ್ ಗಳನ್ನು ಪಡೆದು ಕಿವೀಸ್ ಬ್ಯಾಟರ್ ಗಳಿಗೆ ಮಾರಕವಾಗಿ ಪರಿಣಮಿಸಿದರು.



