ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 8 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಡಿಕಾಕ್ (1 ರನ್) , ಕಪ್ತಾನ ಬವುಮಾ (0) ಅವರ ವಿಕೆಟ್ ನ್ನು ಆರಂಭದಲ್ಲೇ ಕಳೆದುಕೊಂಡಿತು.


ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತು. ಅರ್ಷ್ ದೀಪ್ ಅವರ ಘಾತಕ ಬೌಲಿಂಗ್ ನಿಂದ ದಕ್ಷಿಣ ಆಫ್ರಿಕಾದ ಪ್ರಮುಖ ಮೂರು ವಿಕೆಟ್ ಉರುಳಿತು.
ಸಿಡಿದು ನಿಲ್ಲಬೇಕಾದ ಮಿಲ್ಲರ್ ಅರ್ಷ್ ದೀಪ್ ಎಸೆತಕ್ಕೆ ಖಾತೆ ತೆರೆಯದೆ ಔಟಾದರು.
ಮಾಕ್ರಂ (25 ರನ್),ಪರ್ನೆಲ್ (24 ರನ್) ಅಂತಿಮವಾಗಿ ಕೇಶವ್ ಮಹರಾಜ್ (
41 ರನ್ ಗಳಿಸಿ ಕುಸಿದ ಬ್ಯಾಟಿಂಗ್ ಗೆ ಆಸರೆಯಾದರು.
20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು ಸೌತ್ ಆಫ್ರಿಕಾ 106 ಗಳಿಸಿತು.


ಕನಿಷ್ಠ ಮೊತ್ತದ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ ( 0), ವಿರಾಟ್ ಕೊಹ್ಲಿ ( 3 ರನ್) ವಿಕೆಟ್ ಗರಿಷ್ಠ ಒತ್ತಡಕ್ಕೆ ಕಾರಣವಾಯಿತು.
ಆ ಬಳಿಕ ಕೆ.ಎಲ್.ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟ ಗೆಲುವು ದಾಖಲಿಸಲು ಸಾಧ್ಯವಾಯಿತು.
ರಾಹುಲ್ 4 ಸಿಕ್ಸರ್, 2 ಬೌಂಡರಿ ಸಹಿತ ಭರ್ಜರಿ 51 ರನ್ ಗಳಿಸಿ ಅಜೇರಾಗಿದ್ರೆ, ಇತ್ತ ಸೂರ್ಯಕುಮಾರ್ ಯಾದವ್ ಕೂಡ 50 ರನ್ ಗಳಿಸಿ ಅಜೇರಾಗಿ ಉಳಿದರು.

