ಭಾರತ – ದಕ್ಷಿಣ ಆಫ್ರಿಕಾದ ದೊಡ್ಡ ಮೊತ್ತದ ಮೇಲಾಟದಲ್ಲಿ ಟೀಮ್ ಇಂಡಿಯಾ 16 ರನ್ ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ, ಆರಂಭಿಕರಾಗಿ ಕೆ.ಎಲ್.ರಾಹುಲ್ – ರೋಹಿತ್ ಶರ್ಮಾ 96 ರನ್ ಗಳ ಜೊತೆಯಾಟ ನೀಡಿದರು.
ರೋಹಿತ್ ಶರ್ಮಾ 43 ರನ್ ಗಳಿಸಿ ಔಟಾದರು. ಕೆ.ಎಲ್. ರಾಹುಲ್ 5 ಬೌಂಡರಿ, 4 ಸಿಕ್ಸರ್ ಸಹಿತ ಭರ್ಜರಿ 57 ರನ್ ಗಳ ಕೊಡುಗೆ ನೀಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ವಿರಾಟ್ ರೂಪ ತೋರಿಸಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯಕುಮಾರ್ ಯಾದವ್ 5 ಬೌಂಡರಿ, 5 ಸಿಕ್ಸರ್ ಸಹಿತ 61 ರನ್ ಗಳ ಅಮೋಘ ಕೊಡುಗೆ ನೀಡಿದರು.


ಕಡೆ ಕ್ಷಣದಲ್ಲಿ ದಿನೇಶ್ ಕಾರ್ತಿಕ್ 17 ರನ್ ಗಳನ್ನು ಗಳಿಸಿ ಚುಟುಕ ಆಟವನ್ನಾಡಿದರು.
ದಕ್ಷಿಣ ಆಫ್ರಿಕಾದ ಪರ ಕೇಶವ್ ಮಹಾರಾಜ್ 2 ವಿಕೆಟ್ ಪಡೆದರು..


20 ಓವರ್ ನಲ್ಲಿ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.
ದೊಡ್ಡ ಮೊತ್ತವನ್ನು ಚೇಸ್ ಮಾಡಲು ಇಳಿದ ದಕ್ಷಿಣ ಆಫ್ರಿಕಾ ಆರಂಭಿಕ ಓವರ್ ಗಳಲ್ಲೇ ಕಪ್ತಾನ ಬವುಮಾ, ಹಾಗೂ ರಿಲೀ ರೋಸೌವ್ ಖಾತೆ ತೆರೆಯದೆ ಔಟಾದರು.
ಐಡೆನ್ ಮಾರ್ಕ್ರಾಮ್ ಚೇತರಿಕೆ ಆಟವನ್ನಾಡಿದರೂ ಅಕ್ಷರ್ ಅವರ ಎಸೆತಕ್ಕೆ 33 ರನ್ ಗಳಿಸಿ ಔಟಾದರು.
3 ವಿಕೆಟ್ ಕಳೆದುಕೊಂಡ ಬಳಿಕ ಡೇವಿಡ್ ಮಿಲ್ಲರ್ ಹಾಗೂ ಡಿಕಾಕ್ ಸ್ಫೋಟಕವಾಗಿ ಜೊತೆಯಾಟ ಆಡಿದರು. ಮಿಲ್ಲರ್ 46 ಎಸೆತಗಳಲ್ಲಿ 100 ರನ್ ಗಳಿಸಿದರು. ಮಿಲ್ಲರ್ 106 ರನ್ ಗಳಿಸಿದರೆ, ಡಿಕಾಕ್ 69 ರನ್ ಗಳಿಸಿ ತಂಡದ ಗೆಲುವಿನ ಶ್ರಮಿಸಿದರೂ, ಆ ಪ್ರಯತ್ನ ಸಾಕಾಗಲಿಲ್ಲ.
ಅಂತಿಮವಾಗಿ ದಮ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.

