HomeSportsಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಟ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಯುಎಇ: ಏಷ್ಯಾ ಕಪ್ ನ ಭಾರತ – ಪಾಕ್ ರೋಚಕ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ.


ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಪಡೆ ಬಿಗುದಾಳಿ ಮಾಡಿ ಪಾಕ್ ಆಟಗಾರರನ್ನು ಕಟ್ಟಿ ಹಾಕಿದರು.




ರಿಜ್ವಾನ್ ಹಾಗೂ ಬಾಬರ್ ಆರಂಭಿಕರಾಗಿ ಬ್ಯಾಟ್ ಬೀಸಲು ಹೆಚ್ಚು ಹೊತ್ತು ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ ಶಾರ್ಟ್ ಬೌಲ್ ಗೆ ಕಪ್ತಾನ ಬಾಬರ್ (10) ರನ್ ಗಳಿಸಿ ಕ್ಯಾಚ್ ಕೊಟ್ಟ ಔಟಾದರು. ಆ ಬಳಿಕ ಬಂದ ಫಕರ್ ಜಮಾನ್ ಅವೀಶ್ ಖಾನ್ (10 ರನ) ಎಸೆತಕ್ಕೆ ಕೀಪರ್ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಸಾಗಿದರು. ಮಧ್ಯಮ ಕ್ರಮಾಂಕದ ಇಫ್ತಿಕರ್ ಆಹ್ಮದ್ ಸ್ಫೋಟಕವಾಗಿ ಬ್ಯಾಟ್ ಬೀಸಿ (28 ರನ್) ಹಾರ್ದಿಕ್ ಪಾಂಡ್ಯ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಸತತ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಪಾಕ್ ಗೆ ರಿಜ್ವಾನ್ ಆಸರೆಯಾದರು. 43 ಗಳಿಸಿದ್ದ ರಿಜ್ವಾನ್ ಹಾರ್ದಿಕ್ ಎಸೆತಕ್ಕೆ ಬ್ಯಾಡ್ ಶಾಟ್ ಹೊಡೆದು ಔಟಾದರು. ಖುಷ್ ದೀಲ್(2 ರನ್), ಸದಾಬ್ ಖಾನ್ (10 ರನ್) ಆಸಿಫ್ ಆಲಿ (9 ರನ್) ಗಳಿಸಿ ಔಟಾದರು.

ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.




ಅಂತಿಮವಾಗಿ ಪಾಕಿಸ್ತಾನ 19.5 ಓವರ್ ನಲ್ಲಿ ಸರ್ವಪತನವಾಗಿ 147 ಗಳಿಸಿ 148 ರ ಟಾರ್ಗೆಟ್ ನೀಡಿತು.


ಸುಲಭ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಕೆ.ಎಲ್ ರಾಹುಲ್ ಅವರ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಬಳಿಕ ಬಂದ ವಿರಾಟ್ ಕೊಹ್ಲಿ ಕಪ್ತಾನ ರೋಹಿತ್ ಜೊತೆ ಸೇರಿ ಜೊತೆಯಾಟ ನೀಡಿದರು.


ನವಾಜ್ ಎಸೆತಕ್ಕೆ 12 ರನ್ ಗಳಿಸಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ ಗಳಿಸಿ, ನವಾಜ್ ಅವರ ಎಸೆತಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ನಸೀಂ ಎಸೆತಕ್ಕೆ ಬೌಲ್ಡ್ ಔಟ್ ಆದರು.




ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದ ಸ್ಪೋಟಕ ಆಟ ತಂಡಕ್ಕೆ ಆಸರೆಯಾಯಿತು.

ಜಡೇಜಾ (35), ಹಾರ್ದಿಕ್ ಪಾಂಡ್ಯ 4 ಬೌಂಡರಿ 1 ಸಿಕ್ಸರ್ ಸಹಿತ 33 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.


ಅಂತಿಮವಾಗಿ ಟೀಮ್ ಇಂಡಿಯಾ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

RELATED ARTICLES

Most Popular

Share via
Copy link
Powered by Social Snap