ಮೊಹಲಿ: ಭಾರತ – ಆಸ್ಟ್ರೇಲಿಯಾದ ಮೊದಲ ಟಿ-20 ಹಣಾಹಣೆಯಲ್ಲಿ ಆಸೀಸ್ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಟೀಮ್ ಆರಂಭದಲ್ಲಿ ಕಪ್ತಾನ ರೋಹಿತ್ (11) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ಕೊಹ್ಲಿಯೂ(2 ರನ್ ( ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಔಟಾದರು.
ಕಳಪೆ ಫಾರ್ಮದ ನಲ್ಲಿದ್ದ ಕೆ.ಎಲ್. ರಾಹುಲ್ ಆಸೀಸ್ ಬೌಲರ್ ಗಳನ್ನು ಬೌಂಡರಿ, ಸಿಕ್ಸರ್ ಗಳ ಮೂಲಕ ಕಾಡಿದರು. ರಾಹುಲ್ 3 ಸಿಕ್ಸರ್, 4 ಬೌಂಡರಿಯೊಂದಿಗೆ 55 ರನ್ ಗಳಿಸಿ ಹ್ಯಾಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಭರವಸೆ ಆಟವಾಡಿ ಕ್ರೀಸ್ ನಲ್ಲಿ ನಿಂತಿದ್ದ ಸೂರ್ಯಕುಮಾರ್ ಯಾದವ್ 46 ಗಳಿಸಿ ಔಟಾದರು.
ಒಂದು ಕಡೆ ವಿಕೆಟ್ ಹೋಗುತ್ತಿದ್ದರೂ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬರೀ 30 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಯೊಂದಿಗೆ 70 ಗಳಿಸಿ ಸ್ಪೋಟಕ ಆಟವಾಡಿದರು.
ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟಿ-20 ಯಲ್ಲಿ 200 ಪ್ಲಸ್ ರನ್ ದಾಖಲಿಸಿತು.
208 ರನ್ ಗೆ 6 ವಿಕೆಟ್ ಕಳೆದುಕೊಂಡು 209 ರ ಟಾರ್ಗೆಟ್ ನ್ನು ಆಸೀಸ್ ಗೆ ನೀಡಿತು.
ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಸ್ಪೋಟಕ ಆಟದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಲು ಹೊರಟಿತು. ನಾಯಕ ಫಿಂಚ್ (22 ರನ್) ಅಕ್ಷರ್ ಗೆ ವಿಕೆಟ್ ಒಪ್ಪಿಸಿದರು. ಕ್ಯಾಮರೂನ್ ಗ್ರೀನ್ 30 ಎಸೆತದಲ್ಲಿ 61 ರನ್ ಗಳಿಸಿದರು. ಸ್ಟೀವನ್ ಸ್ಮಿತ್ 35 ರನ್ ಗಳಿಸಿ ಪೆವಿಲಿಯನ್ ಕಡೆ ಸಾಗಿದರು.
ಮ್ಯಾಕ್ ವೇಲ್, ಜೋಶ್ ಇಗ್ಲಿಷ್ ಹೆಚ್ಚು ಹೊತ ಬ್ಯಾಟ್ ಬೀಸದೆ ಔಟಾದರು.
ಮ್ಯಾಥ್ಯೂ ವೇಡ್ 45 ರನ್ ಗಳಿಸಿ ತಂಡದ ಗೆಲುವಿಗೆ ರೂವಾರಿ ಆದರು.
ಅಂತಿಮವಾಗಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು.

