ಭಾರತ – ಆಸ್ಟ್ರೇಲಿಯಾದ ಮೂರನೇ ಟಿ- 20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಪಡೆ ಆಸೀಸ್ ಟೀಮ್ ಇಂಡಿಯಾ ಬೌಲರ್ ಗಳನ್ನು ಆರಂಭದಿಂದಲೇ ಕಾಡಿದರು.


ಗ್ರೀನ್ 3 ಸಿಕ್ಸರ್ , 7 ಬೌಂಡರಿ ಸಹಿತ 52 ರನ್ ಗಳಿಸಿದರು. ಟೀಮ್ ಡೇವಿಡ್ ಭರ್ಜರಿ 54 ರನ್ ಗಳಿಸಿದರೆ, ಸ್ಯಾಮ್ಸ್ ಸ್ಪೋಟಕವಾಗಿ 28 ರನ್ ಗಳಿಸಿ, ತಂಡದ ರನ್ ಗಳಿಕೆಗೆ ಪ್ರಮುಖ ಕಾರಣರಾದರು.
ಒಟ್ಟು 20 ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 186 ರನ್ ಪೇರಿದರು.
ಬ್ಯಾಟಿಂಗ್ ಗಿಳಿದ ಭಾರತ ಕೆ.ಎಲ್.ರಾಹುಲ್ (1 ರನ್) ವಿಕೆಟ್ ಕಳೆದುಕೊಂಡು
ಒತ್ತಡಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ಸ್ಪೋಟಕವಾಗಿ ಕಪ್ತಾನ ರೋಹಿತ್ ಈ ಪಂದ್ಯದಲ್ಲಿ ಬರೀ 17 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿದರು. 30 ರನ್ ಗೆ ಎರಡು ವಿಕೆಟ್ ಕಳೆದುಕೊಂಡು ಒತ್ತಡದಲ್ಲಿ ಸಿಲುಕಿದ ಭಾರತಕ್ಕೆ ವಿರಾಟ್ ಕೊಹ್ಲಿ-ಸೂರ್ಯಕುಮಾರ್ ಯಾದವ್ 104 ರನ್ ಜೊತೆಯಾಟ ನೀಡಿದರು.


ಸೂರ್ಯಕುಮಾರ್ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 69 ರನ್ ಗಳಿಸಿ, ಹ್ಯಾಝಲ್ ವುಡ್ ಎಸೆತಕ್ಕೆ ಔಟಾದರು.
ಮೊದಲು ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ,
63 ರನ್ (3 ಬೌಂಡರಿ, 4 ಸಿಕ್ಸರ್) ಮಾಡಿದರು. ಅಂತಿಮ ಓವರ್ ನಲ್ಲಿ 11 ರನ್ ಬೇಕಿದ್ದಾಗ ಸಿಕ್ಸರ್ ಹೊಡೆದು,ಮುಂದಿನ ಎಸೆತಕ್ಕೆ ಔಟಾದರು.
ಹಾರ್ದಿಕ್ ಪಾಂಡ್ಯ ಅಜೇಯ 25 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.



