ಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್ ಗಳ ಅಂತರದ ಬೃಹತ್ ಗೆಲುವು ದಾಖಲಿಸಿ ಕ್ಲೀನ್ ಸ್ವೀಪ್ ಮಾಡಿದೆ.


ಶುಭ್ಮನ್ ಗಿಲ್ 14 ಬೌಂಡರಿ 2 ಸಿಕ್ಸರ್ ಸಹಿತ 116 ಗಳಿಸಿ ಔಟಾದರೆ, ಇತ್ತ 110 ಎಸೆತಗಳಲ್ಲಿ 13 ಬೌಂಡರಿ 8 ಸಿಕ್ಸರ್ ನೊಂದಿಗೆ ಔಟಾಗದೆ 166 ರನ್ ಗಳಿಸಿದರು. ಇದು ಲಂಕಾ ಸರಣಿಯಲ್ಲಿ ಹಾಗೂ ಈ ವರ್ಷದಲ್ಲಿ ಕೊಹ್ಲಿ ಬ್ಯಾಟ್ ನಿಂದ 2ನೇ ಶತಕ.
ಈ ಮೂಲಕ ವಿರಾಟ್ ಕೊಹ್ಲಿ ಅತ್ಯಧಿಕ ರನ್ ಗಳನ್ನು ಗಳಿಸಿದವರ ಸಾಲಿನಲ್ಲಿ ಕೊಹ್ಲಿ ಕಾಣಿಸಿಕೊಂಡು ದಾಖಲೆ ಬರೆದಿದ್ದಾರೆ.
ಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಈ ಪಂದ್ಯದಲ್ಲಿ 70 ರನ್ ಪೂರೈಸುವುದರೊಂದಿಗೆ ಕೊಹ್ಲಿ
ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ ಅವರ ಅತ್ಯುಧಿಕ ರನ್ ದಾಖಲೆಯನ್ನು ಹಿಂದಿಕ್ಕಿದ್ದರು. ಏಕದಿನ ಕ್ರಿಕೆಟ್ನಲ್ಲಿ 12650 ರನ್ ಕಲೆ ಹಾಕಿದ್ದು, ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.


ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 18426 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಕುಮಾರ ಸಂಗಾಕ್ಕರ 14234 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ (13704 ರನ್) ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಲಂಕಾದ ಸನತ್ ಜಯಸೂರ್ಯ (13430 ರನ್) ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐದನೇ ಸ್ಥಾನದಲ್ಲಿ ಕೊಹ್ಲಿ ಅವರು ಸ್ಥಾನ ಪಡೆದುಕೊಂಡಿದ್ದಾರೆ.



