ಟಿ-20 ಆರಂಭಕ್ಕೂ ಮುನ್ನ ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಜಸ್ ಪ್ರೀತ್ ಬುಮ್ರಾ ಬೆನ್ನು ನೋವಿನಿಂದ ಟೂರ್ನಿಯಿಂದ ಹೊರ ಬಿದ್ದಿರುವುದು ಗೊತ್ತೇ ಇದೆ. ಅವರ ಬದಲಿಗೆ ಸ್ಟ್ಯಾಂಡ್ ಬೈನಲ್ಲಿದ್ದ ದೀಪಕ್ ಚಹರ್ ಆಯ್ಕೆಯಾಗುತ್ತಾರೆ ಎನ್ನುವುದಿತ್ತು ಆದರೆ ದೀಪಕ್ ಚಹರ್ ಅವರ ಬೆನ್ನಿನ ನೋವು ಹೆಚ್ಚಾಗಿರುವುದರಿಂದ ಅವರೂ ಕೂಡ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಟಿ-20 ವಿಶ್ವಕಪ್ ಗೆ ಭಾರತ ಈಗಾಗಲೇ ಪಯಣ ಬೆಳೆಸಿ, ಅಭ್ಯಾಸ ಪಂದ್ಯದಲ್ಲಿ ಗೆದ್ದು ಭರ್ಜರಿ ಸಿದ್ಧತೆಯನ್ನು ನಡೆಸಿದ್ದಾರೆ.
ಈ ನಡುವೆ ಭಾರತ ವೇಗಿ ದೀಪಕ್ ಚಹರ್ ಬದಲಿಗೆ ಹೊಸ ಆಟಗಾರರನ್ನು ಆಯ್ಕೆ ಮಾಡುವತ್ತ ಗಮನ ಹರಿಸಿದ್ದು, ಮೂರು ಮಂದಿ ವೇಗಿಗಳನ್ನು ಆಸ್ಟ್ರೇಲಿಯಕ್ಕೆ ಕಳುಹಿಸಲು ಸಿದ್ದತೆ ನಡೆಸಿದೆ.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಶೀಘ್ರದಲ್ಲಿ ಆಸ್ಟ್ರೇಲಿಯಕ್ಕೆ ಹೋಗಲಿದ್ದು, ಈ ಮೂವರಲ್ಲಿ ಒಬ್ಬರು ಟಿ-
20 ವಿಶ್ವಕಪ್ ತಂಡದಲ್ಲಿ ಆಡಲಿದ್ದಾರೆ.
ಈ ಮೂವರು ಆಟಗಾರರ ಫಿಟ್ ನೆಸ್ ನೋಡಿ ಮುಂದಿನ ನಿರ್ಣಯವನ್ನು ಮಾಡಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

