ಟಿ-20 ವಿಶ್ವಕಪ್ ಗೆ ಜಸ್ ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ಬಿಸಿಸಿಐ ನೇಮಿಸಿದೆ.
ಬೆನ್ನು ನೋವಿನಿಂದ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಆ ಬಳಿಕ ಮೀಸಲು ಆಟಗಾರನಾಗಿದ್ದ ದೀಪಕ್ ಚಹರ್ ಅವರು ಸಹ ಬೆನ್ನು ನೋವಿನಿಂದ ಹೊರ ಬಿದ್ದಿದ್ದರು.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಕ್ಕೆ ಪಯಣ ಬೆಳೆಸಿದ್ದರು. ಇವರಲ್ಲಿ ಮೊಹಮ್ಮದ್ ಶಮಿ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್.
ಅವರ ಬದಲಿಗೆ ಸ್ಟ್ಯಾಂಡ್ ಬೈನಲ್ಲಿದ್ದ ದೀಪಕ್ ಚಹರ್ ಆಯ್ಕೆಯಾಗುತ್ತಾರೆ ಎನ್ನುವುದಿತ್ತು ಆದರೆ ದೀಪಕ್ ಚಹರ್ ಅವರ ಬೆನ್ನಿನ ನೋವು ಹೆಚ್ಚಾಗಿರುವುದರಿಂದ ಅವರೂ ಕೂಡ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಟಿ-20 ವಿಶ್ವಕಪ್ ಗೆ ಭಾರತ ಈಗಾಗಲೇ ಪಯಣ ಬೆಳೆಸಿ, ಒಂದು ಅಭ್ಯಾಸ ಪಂದ್ಯದಲ್ಲಿ ಗೆದ್ದು, ಮತ್ತೊಂದರಲ್ಲಿ ಸೋತು ಸಿದ್ಧತೆಯನ್ನು ನಡೆಸಿದೆ.

