ದುಬೈ: ಆಸೀಸ್ ವಿರುದ್ಧದ ಟಿ-20 ಸರಣಿಯನ್ನು 2-1 ರಲ್ಲಿ ಗೆದ್ದ ಟೀಮ್ ಐಸಿಸಿ
ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಭಾರತ 268 ರೇಟಿಂಗ್ ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.
ಪಾಕಿಸ್ತಾನ ವಿರುದ್ಧದ ಸುದೀರ್ಘ 7 ಟಿ- 20 ವನ್ನಾಡಿ ನಾಲ್ಕರಲ್ಲಿ ಸೋತಿರುವ ಇಂಗ್ಲೆಂಡ್ ತಂಡ 261 ಅಂಕಗಳೊಂದಿಗೆ ದ್ವಿತೀಯ ಸ್ಥಾನಲ್ಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ 258 ಸಮಾನ ಅಂಕಗಳನ್ನು ಹೊಂದಿದೆ. ಆದರೆ ದಶಮಾಂಶ ಲೆಕ್ಕಾಚಾರದಲ್ಲಿ ಮುಂದಿರಯವ ದಕತ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧ ಉಳಿದ ಪಂದ್ಯಗಳನ್ನು ಗೆದ್ದರೆ ಪಾಕ್ ಮೇಲೆ ಬರಬಹುದು.
ಭಾರತ ವಿರುದ್ಧ ಸೋತು ಆಸ್ಟ್ರೇಲಿಯ 6 ನೇ ಸ್ಥಾನಕ್ಕೆ ಕುಸಿದಿದೆ. ಟಿ-20 ವಿಶ್ವಕಪ್ ಗೂ ಆಸೀಸ್ ಪಡೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿ ಆಡಲಿದೆ. ಅಲ್ಲಿ ಉತ್ತಮವಾಗಿ ಆಡಿದರೆ ರ‍್ಯಾಕಿಂಗ್ ನಲ್ಲಿ ಪ್ರಗತಿ ಸಾಧಿಸಬಹುದು.
ಇನ್ನು ನ್ಯೂಜಿಲೆಂಡ್ 5 ನೇ ಸ್ಥಾನದಲ್ಲಿದೆ. ವಿಶ್ವಕಪ್ ಗೂ ಮುನ್ನ ಪಾಕ್ ಹಾಗೂ ಬಾಂಗ್ಲಾ ವಿರುದ್ಧ ಅದು ತ್ರಿಕೋನ ಸರಣಿಯನ್ನು ಆಡಲಿದೆ.

