ಸಿನಿಮಾಗಳಿಗೆ ರೇಟಿಂಗ್ ನೀಡುವ ಐಎಂಡಿಬಿ 2023 ರಲ್ಲಿ ತೆರೆ ಕಾಣುವ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಈ ಪಟ್ಟಿಯಲ್ಲಿ ಬಹುತೇಕ ಹಿಂದಿ, ತಮಿಳು,ತೆಲುಗು ಸಿನಿಮಾಗಳೇ ಸ್ಥಾನ ಪಡೆದಿದೆ.ಕನ್ನಡದ ಕೇವಲ ಒಂದು ಸಿನಿಮಾ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಐದು ತಮಿಳು , ಮೂರು ತೆಲುಗು ಸಿನಿಮಾಗಳು ಈ ಪಟ್ಟಿಯಲ್ಲಿದೆ. ಇದೇ ತಿಂಗಳು ರಿಲೀಸ್ ಆಗಲಿರುವ ಶಾರುಖ್ ಖಾನ್ ಅವರ ‘ಪಠಾಣ್’ ಹಾಗೇ ಶಾರುಖ್ ಅವರ ಅಭಿನಯದ ಇದೇ ವರ್ಷದ ತೆರೆಗೆ ಬರಲಿರುವ ‘ಜವಾನ್’, ‘ದುಂಕಿ’ ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಸಲ್ಮಾನ್ ಖಾನ್ ಅವರ ‘ಟೈಗರ್ 3
‘ಕಿಸಿ ಕಾ ಭಾಯಿ ಕಿಸಿ ಕಿ ಜಾನ್’ ಸಿನಿಮಾಗಳು ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಇನ್ನು ‘ವಾರಿಸು’, ‘ತುನಿವು’, ‘ಸಲಾರ್’, ‘ಆದಿಪುರುಷ್’ ಈ ಪಟ್ಟಿಯಲ್ಲಿ ಸೇರಿಕೊಂಡಿದೆ.
ಕನ್ನಡದಲ್ಲಿ ಈ ವರ್ಷ ನಿರೀಕ್ಷಿತ ಚಿತ್ರಗಳು ಹಲವು ರಿಲೀಸ್ ಆಗಲಿದ್ದು, ಐಎಂಡಿಬಿಯಲ್ಲಿ ಮಾತ್ರ ಆರ್. ಚಂದ್ರು- ಉಪ್ಪಿ ಕಾಂಬಿನೇಷನ್ ನ ‘ಕಬ್ಜ’ ಚಿತ್ರ ಮಾತ್ರ ಸೇರಿಕೊಂಡಿದೆ.
ಐಎಂಡಿಬಿ 2023 ರ ಬಹು ನಿರೀಕ್ಷಿತ ಚಿತ್ರಗಳು:
ಪಠಾಣ್
ಪುಷ್ಪಾ: ಪಾರ್ಟ್ 2
ಜವಾನ್
ಆದಿ ಪುರುಷ್
ಸಲಾರ್
ವರಿಸು
ಕಬ್ಜ
ದಳಪತಿ 67
ದಿ ಆರ್ಚೀಸ್
ಡಂಕಿ
ಟೈಗರ್ 3
ಕಿಸಿ ಕಾ ಭಾಯಿ ಕಿಸಿ ಕಿ ಜಾನ್
ತುನಿವು
ಅನಿಮಲ್
ಏಜೆಂಟ್
ಇಂಡಿಯನ್ 2
ವಾಡಿವಾಸಲ್
ಶೆಹಜಾದಾ
ಬಡೇ ಮಿಯಾ ಚೋಟೆ ಮಿಯಾ
ಭೋಲಾ



