ಡಾಲಿ ಧನಂಜಯ ಅವರ 25 ನೇ ಚಿತ್ರ ರಿಲೀಸ್ ಡೇಟನ್ನು ಇತ್ತೀಚೆಗೆ ಅನೌನ್ಸ್ ಮಾಡಿತ್ತು. ಸಿನಿಮಾ ಒಂದಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ.
ಬರಹಗಾರ-ನಿರ್ದೇಶಕ ವಿಜಯ್ ಎನ್ ಅವರ ಚೊಚ್ಚಲ ಚಿತ್ರವಾಗಿರುವ ಹೊಯ್ಸಳ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ರತ್ನನ್ ಪ್ರಪಂಚ ನಂತರ ಕೆಆರ್‌ಜಿ ಸ್ಟುಡಿಯೋಸ್‌ನೊಂದಿಗೆ ನಟ ಧನಂಜಯ ಅವರ ಎರಡನೇ ಚಿತ್ರ ಇದಾಗಿದೆ.
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ಧನಂಜಯ್ ಅವರೊಂದಿಗೆ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ.
ಪೋಸ್ಟರ್ ಗಳಿಂದ ಸೌಂಡ್ ಮಾಡಿದ ಸಿನಿಮಾ ಇದೀಗ ಆಡಿಯೋ ವಿಷಯಕ್ಕೂ ಸುದ್ದಿಯಾಗಿದೆ. ಆನಂದ್ ಆಡಿಯೋ ದಾಖಲೆ ಬೆಲೆಗೆ ಚಿತ್ರದ ಆಡಿಯೋ ರೈಟ್ಸ್ ಅನ್ನು ಪಡೆದುಕೊಂಡಿದೆ. ಇದು ಡಾಲಿ ಅವರ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಆಡಿಯೋ ರೈಟ್ಸ್ ಎನ್ನಲಾಗಿದೆ.

