HomeNews'ಹೊಯ್ಸಳ' ಟೀಸರ್ ಗೆ ಮಾರು ಹೋದ ಪ್ರೇಕ್ಷಕ‌‌ ಪ್ರಭು: ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ

‘ಹೊಯ್ಸಳ’ ಟೀಸರ್ ಗೆ ಮಾರು ಹೋದ ಪ್ರೇಕ್ಷಕ‌‌ ಪ್ರಭು: ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ

ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ, ಡಾಲಿ ಧನಂಜಯ ಅವರ ‘ಹೊಯ್ಸಳ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

ಗುರುದೇವ್ ನಾಗಿ ಪೊಲೀಸ್ ಅವತಾರದಲ್ಲಿ ಡಾಲಿ ಧನಂಜಯ ಅನ್ಯಾಯ,ಅಪರಾಧದ ವಿರುದ್ಧ ಫೈಟ್ ಮಾಡಿದ್ದು, ಖಾಕಿ‌ ಲುಕ್ ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಕನ್ನಡದಲ್ಲಿ ಕಿಚ್ಚ ಸುದೀಪ, ತೆಲುಗು ನಟ ಅದಿವಿ ಶೇಷ್, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಕಾರ್ತಿ ರವರು ‘ಗ್ಲಿಮ್ಪ್ಸ್ ಆಫ್ ಗುರುದೇವ್’ ಅನ್ನು ಬಿಡುಗಡೆ ಮಾಡಿ ಹಾರೈಸಿದ್ದಾರೆ.

ಡಾಲಿ ಧನಂಜಯರವರ 25ನೇ ಚಿತ್ರ ಇದಾಗಿದ್ದು,
ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್‌ನಡಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ರವರು ಚಿತ್ರವನ್ನು ನಿರ್ಮಿಸಿದ್ದಾರೆ.

ವಿಜಯ್.ಎನ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ರವರು ಛಾಯಾಗ್ರಾಹಕರಾಗಿದ್ಡಾರೆ.

ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಲ್ಲಿ ಈ ಚಿತ್ರ ಮೂಡಿಬಂದಿದೆ.

ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

RELATED ARTICLES

Most Popular

Share via
Copy link
Powered by Social Snap