HomeExclusive Newsಗಮನ ಸೆಳೆಯುತ್ತಿದೆ ಹೊಸ ತಂಡದ "ಹೊಸ ದಿನಚರಿ" ಪೋಸ್ಟರ್

ಗಮನ ಸೆಳೆಯುತ್ತಿದೆ ಹೊಸ ತಂಡದ “ಹೊಸ ದಿನಚರಿ” ಪೋಸ್ಟರ್

ಚಂದನವನದಲ್ಲಿ ಹೊಸ ತಂಡಗಳು,ಹೊಸ ಪ್ರಯೋಗದೊಂದಿಗೆ ಚಿತ್ರವನ್ನು ಮಾಡುತ್ತಲೇ ಇರುತ್ತವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ‘ಹೊಸ ದಿನಚರಿ’


ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಜಂಟಿ ನಿರ್ದೇಶನದಲ್ಲಿ ಬರುತ್ತಿರುವ ‘ಹೊಸ ದಿನಚರಿ’ ಚಿತ್ರದ ಪೋಸ್ಟರ್ ರಿಲೀಸ್ ‌ಇತ್ತೀಚೆಗೆ ನೆರವೇರಿತು.


ಪೋಸ್ಟರ್ ಬಿಡುಗಡೆಯನ್ನು ಹಿರಿಯ ನಟ ಟಿ‌.ಎಸ್. ನಾಗಾಭರಣ ಇಷ್ಟವಾಯಿತು. ಕನ್ನಡ ಚಿತ್ರರಂಗದಲ್ಲಿ ಎರಡು ದಶಕಕೊಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. ಎಂಭತ್ತರಲ್ಲಿ, ಎರಡು ಸಾವಿರದಲ್ಲಿ ಈಗ ಎರಡು ಸಾವಿರದ ಇಪ್ಪತ್ತರಲ್ಲಿ. ಚಿತ್ರದ ಟ್ರೇಲರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆಯಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬಂದು ಎರಡು ದಶಕಗಳಿಗಾಗುತ್ತಿರುವ ಬದಲಾವಣೆ ದಶಕಕ್ಕೆ ಆಗುವಂತೆ ಆಗಲಿ ಎಂದು ಹೇಳಿ ಶುಭ ಹಾರೈಸಿದರು.
ನಿರ್ದೇಶಕರಿಬ್ಬರು ಮಾತಾನಾಡಿ, ಎಲ್ಲರ ಜೀವನದಲ್ಲೂ ಪ್ರೀತಿ ಇದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ? ಎಂಬುದೆ “ಹೊಸ ದಿನಚರಿ” ಯ ಕಥಾಸಾರಾಂಶ. ನಾವು ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವ ನಮ್ಮಗಿದೆ.
ನಮ್ಮ ಈ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ. ಡಿಸೆಂಬರ್ 9 ರಂದು ಚಿತ್ರ ತೆರೆಗೆ ಬರುತ್ತಿದೆ ಪ್ರೋತ್ಸಾಹ ನೀಡಿ ಎಂದರು.


ನಿರ್ಮಾಪಕ ಗಂಗಾಧರ ಸಾಲಿಮಠ ಅವರು ಮಾತಾನಾಡಿ, ನಾನು ಈ ಹಿಂದೆ “ಆಯನ” ಚಿತ್ರವನ್ನು ನಿರ್ಮಾಣ ಮಾಡಿದ್ದೆ.‌ ಈ ಚಿತ್ರದ ಕಥೆ ಇಷ್ಟವಾಯಿತು. ಅದಕ್ಕಾಗಿ ನಿರ್ಮಾಣ ಮಾಡಿದ್ದೇನೆ ಎಂದರು.

ಚಿತ್ರದ ನಾಯಕರಾದ ದೀಪಕ್ ಸುಬ್ರಹ್ಮಣ್ಯ‌ ಹಾಗೂ ಚೇತನ್ ವಿಕ್ಕಿ, ನಟಿಯರಾದ ಮಂದಾರ ಹಾಗೂ ವರ್ಷ, ಛಾಯಾಗ್ರಾಹಕ ರಾಕಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಹೊಸ ದಿನಚರಿ” ಬಗ್ಗೆ ಇರುವ ನಿರೀಕ್ಷೆಯನ್ನು ಮಾತಿನ ಮೂಲಕ ತಿಳಿಸಿದರು.

ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಈ ಚಿತ್ರದ ನಟಿಸಿದ್ದಾರೆ.

ಸಮಾರಂಭಕ್ಕೂ ಮುನ್ನ ಟ್ರೇಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಲಾಯಿತು.

RELATED ARTICLES

Most Popular

Share via
Copy link
Powered by Social Snap