‘ಕಾಂತಾರ’ ಮಾಡುತ್ತಿರುವ ಕಲೆಕ್ಷನ್ ನಿಂದ ಹೊಂಬಾಳೆ ಫಿಲ್ಮ್ಸ್ ಮತ್ತೊಮ್ಮೆ ಗೆದ್ದಿದೆ. ಕೆಜಿಎಫ್ -2 ಬಳಿಕ ಮತ್ತೊಮ್ಮೆ ಭರ್ಜರಿ ಕಮಾಯಿ ಮಾಡಿದೆ.
‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್, (1,2) ಬಳಿಕ ಈಗ ನೆಲದ ಸಂಸ್ಕೃತಿಯನ್ನು ಹೇಳುವ ‘ಕಾಂತಾರ’ದಿಂದ ಕೋಟಿ – ಕೋಟಿ ಬಾಚಿಕೊಳ್ಳುತ್ತಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಮುಟ್ಟಿದೆಲ್ಲಾ ಚಿನ್ನವಾಗಿ ಮಾರ್ಪಾಡಾಗುತ್ತಿದೆ. ಪ್ಯಾನ್ ಇಂಡಿಯಾ ‘ಸಲಾರ್’ , ‘ಟೈಸನ್’ ನಿರ್ಮಾಣದಲ್ಲಿ ಹೊಂಬಾಳೆ ಬ್ಯುಸಿಯಾಗಿದೆ.


ನಿರ್ಮಾಪಕ ವಿಜಯ್ ಕಿರಗಂದೂರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಸಿನಿಮಾ ಸಂಬಂಧಿತ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ.
ನಮ್ಮ ನೆಲದ ಕಥೆಯನ್ನು ಇನ್ನಷ್ಟು ಹೆಚ್ಚಾಗಿ ಹೇಳುವ ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಭಾರತ ವಿಶ್ವದಲ್ಲಿ ಸಿನಿಮಾ ಹಬ್ ಆಗಿ ಮಾಡುವ ನಿಟ್ಟಿನಲ್ಲಿ ನಮ್ಮ ನೆಲದ ಕಥೆಯನ್ನು ಸಿನಿಮಾದ ಮೂಲಕ ಹೇಳಲಾಗುವುದು ಅನುರಾಗ್ ಠಾಕೂರ್ ಅವರನ್ನು ಭೇಟಿ ಆಗಿದ್ದು ಸಂತಸ ತಂದಿದೆ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.
ಹೊಂಬಾಳೆಯ ಸಹ ಸ್ಥಾಪಕ ಚೆಲುವೆ ಗೌಡ, ಕೆಆರ್ ಜಿಯ ಕಾರ್ತಿಕ್ ಗೌಡ ಅವರು ಉಪಸ್ಥಿತರಿದ್ದರು.

