ರಿಷಬ್ ಶೆಟ್ಟಿ ಅವರ ‘ಕಾಂತಾರ’ ದೊಡ್ಡ ಮಟ್ಟದಲ್ಲಿ ಹಿಟ್ ಆದ ಬಳಿಕ ಇತ್ತೀಚೆಗೆ ಚಿತ್ರ ತಂಡ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿತ್ತು.
ಸಿನಿಮಾದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ವೇಳೆ ಅನೇಕರು ‘ಕಾಂತಾರ-2’ ಬರುತ್ತದೆ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದರು. ಆದರೆ ಚಿತ್ರ ತಂಡವಾಗಲಿ, ನಿರ್ಮಾಣ ಸಂಸ್ಥೆಯಾಗಲಿ ಯಾರೂ ಕೂಡ ಈ ಬಗ್ಗೆ ಮಾಹಿತಿಯನ್ನೇ ಕೊಟ್ಟಿರಲಿಲ್ಲ.
ಇದೀಗ ‘ಕಾಂತಾರ-2’ ಸಿನಿಮಾ ಬರುತ್ತದೆ ಎನ್ನುವುದನ್ನು ಸ್ವತಃ ಹೊಂಬಾಳೆಯ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರೇ ವೆನ್ ಸೈಟ್ ವೊಂದಕ್ಕೆ ಸಂದರ್ಶನದ ವೇಳೆ ಹೇಳಿಕೆಯನ್ನು ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ ಅವರು ʼಕಾಂತಾರ-2” ಸಿನಿಮಾದ ಕಥೆ ಬರೆಯುತ್ತಿದ್ದಾರೆ. ಅದರ ತಯಾರಿಗಾಗಿ, ಚಿತ್ರಕ್ಕಾಗಿ ಸಂಶೋಧನೆ ನಡೆಸಲು ಎರಡು ತಿಂಗಳು ತಮ್ಮ ರೈಟಿಂಗ್ ಟೀಮ್ ನೊಂದಿಗೆ ರಿಷಬ್ ಕರಾವಳಿ ಕರ್ನಾಟಕದ ಕಾಡುಗಳನ್ನು ಸುತ್ತಲಿದ್ದಾರೆ” ಎಂದಿದ್ದಾರೆ.
ಜೂನ್ ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ. ಮಳೆಯ ದೃಶ್ಯಗಳು ಸಿನಿಮಾದಲ್ಲಿ ಬೇಕಾಗಿರುವುದರಿಂದ ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ಸಿನಿಮಾವನ್ನು 2024 ರ ಏಪ್ರಿಲ್ ಅಥವಾ ಮೇ ವೇಳೆಗೆ ರಿಲೀಸ್ ಮಾಡುವ ಯೋಜನೆ ನಮ್ಮದು ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.

