ಹೊಂಬಾಳೆ ಫಿಲ್ಮ್ಸ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಕನ್ನಡದಲ್ಲಿ ಮೋಡಿ ಮಾಡಿದ ಬಳಿಕ ಈಗ ಅನ್ಯ ಭಾಷೆಯಲ್ಲೂ ಹೊಂಬಾಳೆ ನಿರ್ಮಾಣಕ್ಕೆ ಇಳಿದಿರುವುದು ಗೊತ್ತೇ ಇದೆ. ಪ್ರಶಾಂತ್ ನೀಲ್ ಅವರ ಪ್ಯಾನ್ ಇಂಡಿಯಾ ʼಸಲಾರ್ʼ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಹೊಂಬಾಳೆ ಕೀರ್ತಿ ಸುರೇಶ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರವೊಂದನ್ನು ನಿರ್ಮಾಣ ಮಾಡಲು ರೆಡಿಯಾಗಿದೆ.
ಹಿಂದಿಯ ʼಫ್ಯಾಮಿಲಿ ಮ್ಯಾನ್ʼ ವೆಬ್ ಸೀರಿಸ್ ನಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದ ಸುಮನ್ ಕುಮಾರ್ ಕೀರ್ತಿ ಅವರ ʼರಘುತಥಾʼ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ದ ಕ್ಯಾಪ್ ತೊಡಲಿದ್ದಾರೆ.
ಹೊಂಬಾಳೆ ಕಾಲಿವುಡ್ ಗೆ ಕಾಲಿಡುತ್ತಿರುವ ಕುರಿತು ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಘೋಷಿಸಿದೆ. ಟೈಟಲ್ ನೊಂದಿಗೆ ʼಮನೆಯಿಂದಲೇ ಕ್ರಾಂತಿ ಆರಂಭವಾಗುತ್ತದೆʼ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದೊಂದು ಹಾಸ್ಯಮಯ ಚಿತ್ರವಾಗಿತ್ತು ಮಹಿಳೆಯೊಬ್ಬಳ ಮೂಲಕ ಹೋರಾಟ ಹಾಗೂ ಸ್ಪೂರ್ತಿಯನ್ನು ತೋರಿಸುವ ಸಿನಿಮಾವಾಗಲಿದೆ ಎಂದು ಚಿತ್ರ ತಂಡ ಹೇಳಿದೆ.
ಈ ಸಿನಿಮಾದಲ್ಲಿ ಎಂ. ಎಸ್ . ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದಸಾಮಿ ಮತ್ತು ರಾಜೇಶ್ ಬಾಲಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2023 ರಲ್ಲಿ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

