ಡಾಲಿ ಧನಂಜಯ ಹುಟ್ಟು ಹಬ್ಬದ ಸಂಭ್ರಮ ಅಭಿಮಾನಿಗಳಲ್ಲಿ ಜೋರಾಗಿದೆ. ಈ ಬಾರಿಯೂ ಡಾಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಅಭಿಮಾನಿಗಳು ಅವರ ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಾರೆ.
ಅಭಿಮಾನಿಗಳಿಗಾಗಿ ನಟ ರಾಕ್ಷಸ ‘ಹೆಡ್‌ಬುಷ್’ ಚಿತ್ರದ ಹಾಡೊಂದನ್ನು ಬರ್ತ್ ಡೇ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ರೌಡಿಗಳು ನಾವು ರೌಡಿಗಳು’ ಎನ್ನುತ್ತಾ ಲಿರಿಕಲ್ ಹಾಡಿನ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಾಲಿ ಹೆಚ್ಚಿಸಿದ್ದಾರೆ.
ಅಗ್ನಿ ಶ್ರೀಧರ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಜಯರಾಜ್ ಬದುಕಿನ ಪುಟದ ಆರಂಭಿಕ ದಿನಗಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ.
ಆನಂದ್ ಆಡಿಯೋದಲ್ಲಿ ಹಾಡು ರಿಲೀಸ್ ಆಗಿದೆ.
ಶೂನ್ಯ ನಿರ್ದೇಶನದ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಡಾಲಿ ಪಿಕ್ಚರ್ ನಿರ್ಮಾಣ ಮಾಡಿದೆ.
ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ ಸೇರಿ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಮಾತ್ರವಲ್ಲದೆ ಇತರ ಭಾಷೆಯಲ್ಲೂ ಚಿತ್ರ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದೇ ವರ್ಷದ ಅಕ್ಟೋಬರ್ 21 ರಂದು ಚಿತ್ರ ತೆರೆಗೆ ಬರಲಿದೆ.

