ಡಾಲಿ ಧನಂಜಯ ಅವರ ʼಹೆಡ್ ಬುಷ್ʼ ಚಿತ್ರದಲ್ಲಿ ʼಕರಗʼ ಬಗ್ಗೆ ಉಂಟಾದ ವಿವಾದ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಹೋಗಿದ್ಗು, ವಾಣಿಜ್ಯ ಮಂಡಳಿ ಚಿತ್ರ ತಂಡ ಹಾಗೂ ತಿಗಳ ಸಮುದಾಯದ ಮುಖ್ಯಸ್ಥರನ್ನು ಕರೆದು ವಿವಾದ ಬಗ್ಗೆ ಚರ್ಚಿಸಿ ಒಂದು ನಿರ್ಣಯವನ್ನು ತೆಗೆದುಕೊಂಡಿದೆ.
’ಹೆಡ್‌ಬುಷ್’ಚಿತ್ರದಲ್ಲಿ ಕರಗದ ಬಗ್ಗೆ ತೋರಿಸಲಾದ ದೃಶ್ಯಗಳು ಮತ್ತು ಸಂಭಾಷಣೆಗೆ ತಿಗಳ ಸಮುದಾಯದವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಸಂಬಂಧ ವಾಣಿಜ್ಯ ಮಂಡಳಿಗೆ ದೂರು ಬಂದಿತ್ತು. ಅಧ್ಯಕ್ಷ ಬಾ.ಮ.ಹರೀಶ್ ಚಿತ್ರತಂಡ ಹಾಗು ಸಮುದಾಯವರನ್ನು ಕರೆಸಿ ಮಾತನಾಡಿದ್ದರಿಂದ ವಿವಾದಕ್ಕೆ ಅಂತ್ಯ ಸಿಕ್ಕಿದೆ.
ಕರಗದ ದೃಶ್ಯದಲ್ಲಿ ಬರುವ ಡೈಲಾಗ್ಸ್ ಗಳಿಗೆ ಬೀಪ್ ಹಾಕಲು ಚಿತ್ರ ತಂಡ ನಿರ್ಧರಿಸಿದೆ.
ಸಭೆಯಲ್ಲಿ ಕಥೆಗಾರ ಅಗ್ನಿಶ್ರೀಧರ್, ನಾಯಕ ಧನಂಜಯ್, ನಿರ್ದೇಶಕ ಶೂನ್ಯ, ಶ್ರೀ ಧರ್ಮರಾಯ ದೇವಸ್ಥಾನದ ಅಧ್ಯಕ್ಷ ಸತೀಶ್, ತಿಗಳರ ಸಮುದಾಯದ ಅಧ್ಯಕ್ಷ ಸುಬ್ಬಣ್ಣ ಮುಂತಾದವರು ಉಪಸ್ತಿತರಿದ್ದರು.
ಡಾಲಿ ಧನಂಜಯ ಈ ಸಂಬಂಧ ನಿನ್ನೆ ಕ್ಷಮೆ ಕೇಳಿದ್ದರು.



