ಡಾಲಿ ಧನಂಜಯ ಹೊಸ ಪಾತ್ರಗಳಿಗೆ ಒಗ್ಗಿಕೊಳ್ಳಲು ಇಷ್ಟಪಡುತ್ತಾರೆ. ಈ ಹಿಂದಿನ ಚಿತ್ರಗಳಲ್ಲೂ ಭಿನ್ನವಾದ ಪಾತ್ರಗಳನ್ನು ಆಯ್ದುಕೊಂಡು ಡಾಲಿ ಸೈ ಎನ್ನಿಸಿಕೊಂಡಿದ್ದಾರೆ.


‘ಹೆಡ್ ಬುಷ್’ ನಲ್ಲಿ ಡಾನ್ ಜಯರಾಜ್ ಅವರ ಪಾತ್ರವನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಬೆಂಗಳೂರನ್ನು ಆಳಿದ ಭೂಗತ ವ್ಯಕ್ತಿ ಜಯರಾಜ್ ಪಾತ್ರವನ್ನು ಡಾಲಿ ಧನಂಜಯ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದೇ ಲುಕ್, ಟಾಕ್, ಫೈಟ್ ನಲ್ಲಿ ಡಾಲಿ ಮಿಂಚಿದ್ದಾರೆ. ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಹಿಟ್ ಆಗಿದೆ. ಪ್ರಮೋಷನ್ ಜೋರಾಗಿದೆ.
ನಾಳೆ ವಿಶ್ವದಾದ್ಯಂತ ಅಗ್ನಿ ಶ್ರೀಧರ್ ಕಥೆ, ಸಂಭಾಷಣೆಯನ್ನು ಬರೆದಿರುವ, ಶೂನ್ಯ ನಿರ್ದೇಶನ ಮಾಡಿರುವ ‘ಹೆಡ್ ಬುಷ್’ ನೂರಾರು ಥಿಯೇಟರ್ ನಲ್ಲಿ ತೆರೆಗೆ ಬರಲಿದೆ.
ಬುಕಿಂಗ್ ಆರಂಭವಾಗಿದ್ದು, ಆನ್ಲೈನ್, ಆಫ್ ಲೈನ್ ನಲ್ಲಿ ಮುಂಗಡವಾಗಿ ಟಿಕೆಟ್ ಬುಕ್ ಆಗಿದೆ. ಕೆಲವೆಡೆ ಸೋಲ್ಡ್ ಔಟ್ ಆಗಿದೆ. ಡಾಲಿ ಅಭಿಮಾನಿಗಳು ಚಿತ್ರದ ಸ್ವಾಗತಕ್ಕಾಗಿ ಭರ್ಜರಿ ಸಿದ್ದತೆ ನಡೆಸಿ, ‘ಹೆಡ್ ಬುಷ್’ ಗೆ ಜೈಕಾರ ಹಾಕಲು ರೆಡಿಯಾಗಿದ್ದಾರೆ.
ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚರಣ್ ರಾಜ್ ಅವರು ಮ್ಯೂಸಿಕ್ ನೀಡಿದ್ದಾರೆ.
ಲೂಸ್ ಮಾದ ಯೋಗಿ,ರಘು ಮುಖರ್ಜಿ, ಪಾಯಲ್ ರಜಪೂತ್ ,ಶ್ರುತಿ ಹರಿಹರನ್, ದೇವರಾಜ್ ಮುಂತಾದವರು ನಟಿಸಿದ್ದಾರೆ.



