ಬೆಣ್ಣೆನಗರಿ ದಾವಣಗೆರೆಯಲ್ಲಿ ʼಹೆಡ್ ಬುಷ್” ಚಿತ್ರದ ಅದ್ಧೂರಿ ಪ್ರೀ ರಿಲೀಸ್ ನಡೆದಿದೆ. ಈ ಸಮಾರಂಭದಲ್ಲಿ ರಚಿತಾ ರಾಮ್, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಅಮೃತಾ ಅಯ್ಯಂಗಾರ್, ಸಪ್ತಮಿಗೌಡ, ಸಂಜನಾ, ಕಾರ್ತೀಕ್ ಗೌಡ, ಯೋಗಿ ಜಿ.ರಾಜ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಭಾಗಿಯಾಗಿದ್ದರು.
ಶೂನ್ಯ ನಿರ್ದೇಶನ “ಹೆಡ್ ಬುಷ್” ಗೆ ಅಗ್ನಿ ಶ್ರೀಧರ್ ಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಸಾವಿರಾರು ಜನರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಖ್ಯ ಅತಿಥಿ ಮೋಹಕ ತಾರೆ ರಮ್ಯಾ ಮಾತಾನಾಡಿ, ಧನಂಜಯ ಸ್ನೇಹಕ್ಕಾಗಿ ನಾನಿಂದು ದಾವಣಗೆರೆಗೆ ಬಂದಿದ್ದೇನೆ. ಬಣ್ಣೆ ದೋಸೆ ಅಂದರೆ ನನಗೆ ಇಷ್ಟ, ನಾನದನ್ನು ಸವಿದುಕೊಂಡೇ ಹೋಗುತ್ತೇನೆ ಎಂದು ಹೇಳಿದರು.
ಲಾಂಗ್ ಹಿಡಿದು ಹಾಡೊಂದಕ್ಕೆ ಹೆಜ್ಜೆ ಹಾಕಿದ ಬಳಿಕ ಮಾತಾನಾಡಿ ನಾಯಕ ಡಾಲಿ ಧನಂಜಯ, ನನ್ನ ಪ್ರತಿ ಚಿತ್ರದಲ್ಲೂ ಸಹ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೆ ಬಂದಿದ್ದೇನೆ. ಹಿಂದಿನ ಬಡವ ರಾಸ್ಕಲ್ ಚಿತ್ರದಲ್ಲಿ ಶಂಕರ್ ಗುರು ಅವರಿಗೆ ಅವಕಾಶ ಕೊಟ್ಟ ಹಾಗೆ ಈ ಚಿತ್ರದಲ್ಲೂ ಸಹ ಶೂನ್ಯ ಅವರಿಗೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದೇನೆ. ಅಲ್ಲದೆ ನನ್ನ ಮುಂದಿನ ಚಿತ್ರ ಟಗರು ಪಲ್ಯಾ ಚಿತ್ರದಲ್ಲೂ ಸಹ ಮತ್ತೊಬ್ಬ ಯುವಪ್ರತಿಭೆಗೆ ನಿರ್ದೇಶನದ ಅವಕಾಶ ನೀಡಿದ್ದೇನೆ. ಹೆಡ್ ಬುಷ್ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನೀವೆಲ್ಲಾ ಚಿತ್ರವನ್ನು ಪ್ರೋತಾಹಿಸುತ್ತೀರ ಎನ್ನುವ ವಿಶ್ವಾಸವಿದೆ ಎಂದರು.
ನಾಯಕಿ ಪಾಯಲ್ ರಜಪೂತ್ ಮಾತನಾಡಿ ಕನ್ನಡ ನೆಲ ಇಲ್ಲಿನ ಸಂಸ್ಕ್ರತಿ ನನಗಿಷ್ಟ. ಈ ಸಿನಿಮಾ ನನಗೆ ತುಂಬಾನೇ ಪ್ರಮುಖ. ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಿದ್ದೇನೆ ಎಂದರು.

