‘ನಟ ಡಾಲಿ ಧನಂಜಯ, ಲೂಸ್ ಮಾದ ಯೋಗಿ, ರಘು ಮುಖರ್ಜಿ, ಶ್ರುತಿ ಹರಿಹರನ್ ಅಭಿನಯದ ‘ಹೆಡ್ ಬುಷ್’ಸಿನಿಮಾದ ರಿಲೀಸ್‌ಗೆ ದಿನಗಣನೆ ಆರಂಭ’
ಇದೆ ತಿಂಗಳ 21ಕ್ಕೆ ತೆರೆಗೆ ಬರಲಿರುವ ‘ಹೆಡ್ ಬುಷ್ ‘ ಸಿನಿಮಾ
ಸಿನಿಮಾಗಾಗಿ ಕಾತರದಿಂದ ಕಾದಿರುವ ‘ಡಾಲಿ ‘ಅಭಿಮಾನಿಗಳು ಧನಂಜಯ್ ರನ್ನು ನೋಡಲು ಕುತೂಹಲದಿಂದ ಕಾಯುತ್ತಿರುವ ಸಮಯಕ್ಕೆ ದಿನಗಣನೆ ಆರಂಭವಾಗಿದೆ. ‘ಹೆಡ್ ಬುಷ್ ‘ ಬಿಡುಗಡೆಗೆ ಇನ್ನೂ 7 ದಿನಗಳಷ್ಟೇ ಬಾಕಿ ಇದೆ.
‘ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪ್ರಿ-ರಿಲೀಸ್ ಇವೆಂಟ್’
‘ಹೆಡ್ ಬುಷ್’ ತೆರೆಕಾಣುತ್ತಿರುವುರಿಂದ ಇಂದು ದಾವಣಗೆರೆ ಯಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗುತ್ತಿದೆ, ಸಂಜೆ 6.ಗಂಟೆಗೆ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಯಾಗಿ, ಖ್ಯಾತ ನಟಿಯರಾದ ಸ್ಯಾಂಡಲ್ ವುಡ್ ಕ್ವೀನ್ ‘ರಮ್ಯಾ’, ಡಿಂಪಲ್ ಕ್ವೀನ್ ‘ರಚಿತಾ ರಾಮ್’ ನಟ ಧನಂಜಯ್ , ಲೂಸ್ ಮಾದ ಯೋಗಿ, ರಘು ಮುಖರ್ಜಿ, ಸತೀಶ್ ನಿನಸಂ, ದುನಿಯಾ ವಿಜಯ್,
ಹಿರಿಯ ನಟರಾದ ರವಿಚಂದ್ರನ್, ದೇವರಾಜ್ ,ನಾಯಕಿಯಾರಾದ ಶ್ರುತಿ ಹರಿಹರನ್ ,ಪಾಯಲ್ ರಾಜಪುತ್, ನಿರ್ಮಾಪಕರಾದ ಸೊಮ್ಮಣ್ಣ,ನಿರ್ದೇಶಕರಾದ ಶೂನ್ಯ, ಕಥೆಗಾರರಾದ ಅಗ್ನಿ ಶ್ರೀಧರ್ ಹಾಗೂ ಕನ್ನಡ ಚಿತ್ರರಂಗದ ಗಣ್ಯ ವ್ಯಕ್ತಿಗಳು, ವಿತರಕರು, ಪ್ರದರ್ಶಕರು ಮತ್ತು ಅನೇಕ ಕನ್ನಡ ಅಭಿಮಾನಿಗಳ ಸಮ್ಮುಖದಲ್ಲಿ ‘ಹೆಡ್ ಬುಷ್ ‘ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.
ಈ ಅದ್ದೂರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಅದರಲ್ಲೂ ಉತ್ತರ ಕರ್ನಾಟಕದಿಂದ ಹೆಚ್ಚುಅಭಿಮಾನಿಗಳು ದಾವಣಗೆರೆಯಲ್ಲಿ ನಡೆಯುವ ಪ್ರೀ-ರಿಲೀಸ್ ಇವೆಂಟ್ ನೋಡಲು ಹೋಗುತ್ತಿದ್ದಾರೆ ಎಂದು ಚಿತ್ರತಂಡದ ಮೂಲಗಳು ಮಾಹಿತಿ ನೀಡುತ್ತವೆ.

