ಡಾಲಿ ಧನಂಜಯ ಅವರ ‘ಹೆಡ್ ಬುಷ್’ ಚಿತ್ರ ರಿಲೀಸ್ ಗೆ ಕೆಲವೇ ದಿನಗಳು ಉಳಿದಿವೆ. ಸಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಜಯರಾಜ್ ಬದುಕಿನ ‘ಹೆಡ್ ಬುಷ್’ ಸಿನಿಮಾ ಅ.21 ರಂದು ರಿಲೀಸ್ ಆಗಲಿದೆ.
ಸಿನಿಮಾ ಹೇಗೆ ಡಿಫ್ರೆಂಟ್ ಕಥೆಯನ್ನು ಒಳಗೊಂಡಿದ್ದೀಯೋ, ಹಾಗೆ ಚಿತ್ರದ ಪ್ರಚಾರವೂ ಅಷ್ಟೇ ಭಿನ್ನವಾಗಿದೆ.
ಇತ್ತೀಚೆಗೆ ಡಾಲಿ ದುಬೈಗೆ ರಾಜ್ ಕಪ್ ಗಾಗಿ ಹೋಗುವಾಗ ರೆಟ್ರೋ ಸ್ಟೈಲ್, ಜಯರಾಜ್ ಲುಕ್ ನಲ್ಲಿ ಹೋಗಿದ್ದರು. ಆ ಬಳಿಕ ವಾಪಾಸ್ ಬಂದ ಮೇಲೂ ಡಾಲಿ ಅದೇ ರೆಟ್ರೋ ಸ್ಟೈಲ್ ನಲ್ಲಿ ಮಿಂಚಿದ್ದರು. ಸಿನಿಮಾಕ್ಕಾಗಿ ಡಾಲಿ ಹಾವ-ಭಾವವನ್ನು ಬದಲಾಯಿಸಿಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ನಾವು ರೌಡಿಗಳೆಂದು ಜಯರಾಜ್ & ಗ್ಯಾಂಗ್ ನಂತೆ ಡಾಲಿ ಧನಂಜಯ ಅಂಬಾಸಿಡರ್ ಕಾರಿನಲ್ಲಿ ‘ಹೆಡ್ ಬುಷ್’ ಪ್ರಚಾರವನ್ನು ಮಾಡುತ್ತಿದ್ದಾರೆ.
ಈಗ ಡಾಲಿ ಧನಂಜಯ ಹಾಗೂ ಸಿನಿಮಾದಲ್ಲಿ ನಟಿಸಿರುವ ರಘು ಮುಖರ್ಜಿ ಅವರು ಸೈಕಲ್ ಹತ್ತಿ, ಸೈಕಲ್ ಗೆ ಕನ್ನಡದ ಧ್ವಜವನ್ನು ಹಾಕಿ ಕಂಠೀರವ ಸ್ಟುಡಿಯೋದಿಂದ ವೀರೇಶ್ ಚಿತ್ರ ಮಂದಿರದವರೆಗೆ ಪ್ರಚಾರ ನಡೆಸಿದ್ದಾರೆ.
ಅಪ್ಪು, ಅಂಬಿ, ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ಕೊಟ್ಟು ಸಿನಿಮಾದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.
ಇದೇ ಅಕ್ಟೋಬರ್ 16 ರಂದು ದಾವಣಗೆರೆಯ ಎಂಬಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ 16ರ ಸಂಜೆ 5.30ಕ್ಕೆ ನಡೆಯಲಿದೆ. ಈ ಸಮಾರಂಭದಲ್ಲಿ ಮೋಹಕ ತಾರೆ ರಮ್ಯಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗಿಯಾಗಲಿದ್ದಾರೆ.

