ಶಿವರಾಜ್ ಅವರ 125 ನೇ ಸಿನಿಮಾ ‘ವೇದ’ ಸಿನಿಮಾಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ನೋಡಿ ಅಭಿಮಾನಿಗಳು ಚಪ್ಪಾಳೆ, ಪ್ರಶಂಸೆ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತಿದ್ದಾರೆ.
ಸಿನಿಮಾದ ಬಹು ಮುಖ್ಯ ಪಾತ್ರಗಳಾದ ಅದಿತಿ ಸಾಗರ್, ಗಾಣವಿ ಲಕ್ಷ್ಮಣ್ ಶ್ವೇತ ಚಂಗಪ್ಪ ಉಮಾಶ್ರೀ ಅವರ ಪಾತ್ರಗಳು ಪ್ರೇಕ್ಷಕರ ಶ್ಲಾಘನೆಯನ್ನು ಪಡೆದುಕೊಳ್ಳುತ್ತದೆ.
ಹರ್ಷ- ಶಿವಣ್ಣ ಕಾಂಬಿನೇಷನ್ 4ನೇ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿ ಯಶಸ್ಸಿನತ್ತ ಸಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ‘ವೇದ-2’ ಸಿನಿಮಾಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಶಿವರಾಜ್ ಕುಮಾರ್ ಅವರನ್ನು ರಗಡ್ ಲುಕ್ ನಲ್ಲಿ ’ವೇದ’ನಾಗಿ ಮತ್ತೊಮ್ಮೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಸಿನಿಮಾದ ಎರಡನೇ ಭಾಗಕ್ಕೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಹರ್ಷ ಅವರು ಈ ಬಗ್ಗೆ ಮಾತಾನಾಡಿದ್ದಾರೆ.
ವೇದ ನೋಡಿದವರಿಗೆ ಸಿನಿಮಾ ಇಷ್ಟ ಆಗಿದೆ. ನನಗೆ ಬಹಳಷ್ಟು ಮಂದಿ ವೇದ 2 ಮಾಡಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಹೊರಗಡೆನೂ ಚರ್ಚೆ ನಡೆಯುತ್ತಿದೆ. ಅದು ನನಗೆ ಗೊತ್ತಿದೆ. ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇನೆ.’ ಎಂದು ನಿರ್ದೇಶಕ ಎ ಹರ್ಷ ಮಾಹಿತಿ ನೀಡಿದ್ದಾರೆ.
ಗೀತಾ ಆರ್ಟ್ಸ್ ಹಾಗೂ ಜೀ ಸ್ಟುಡಿಯೋ ಕಾಂಬಿನೇಷನ್‌ನಲ್ಲಿ ‘ವೇದ’ ನಿರ್ಮಾಣ ಆಗಿದೆ.

