HomeMoviesಅಂತಿಮ ಘಟ್ಟದ ಚಿತ್ರೀಕರಣದಲ್ಲಿ ತಂದೆ ಮಗನ ಬಾಂಧವ್ಯ ಸಾರುವ ಸಿನಿಮಾ 'ಹರ್ಷ'!

ಅಂತಿಮ ಘಟ್ಟದ ಚಿತ್ರೀಕರಣದಲ್ಲಿ ತಂದೆ ಮಗನ ಬಾಂಧವ್ಯ ಸಾರುವ ಸಿನಿಮಾ ‘ಹರ್ಷ’!


ತಂದೆ ಮಗನ ನಡುವಿನ ಪ್ರೀತಿ, ಬಾಂಧವ್ಯದ ಕಥೆಯನ್ನು ಹೇಳುವ ಚಿತ್ರ ಹರ್ಷ. ಸೋಮು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಈಗಾಗಲೇ ಈ ಚಿತ್ರದ ಚಿತ್ರೀಕರಣವು ಕೊನೆಯ ಹಂತವನ್ನು ತಲುಪಿದೆ, ಒಂದು ಪರಿಣಾಮಕಾರಿ ಮಕ್ಕಳ ಕಥೆಯೊಂದಿಗೆ ಕನ್ನಡ ಪ್ರೇಕ್ಷಕರ ಮನರಂಜಿಸಲು ನಿರ್ದೇಶಕ ಸೋಮಶೇಖರ್ ಅವರು ಈ ಚಿತ್ರದ ಮೂಲಕ ಪ್ರಯತ್ನಿಸಿದ್ದಾರೆ. ನಿರ್ದೇಶಕರೇ ಚಿತ್ರದ ಕಥಾಹಂದರ ಹೆಣೆದಿದ್ದು, ರಾಘವೇಂದ್ರ ಬಿ. ಮೈಸೂರು ಅವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಸಹ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಹರ್ಷ ಅವರು ಕಾಣಿಸಿಕೊಂಡಿದ್ದು, ಈ ಪಾತ್ರದ ಸುತ್ತ ಇಡೀ ಕಥೆ ಸಾಗುತ್ತದೆ. ತಂದೆಯ ಪಾತ್ರದಲ್ಲಿ ಹಿರಿಯನಟ ಶಂಕರ್ ಅಶ್ವಥ್ ಅವರು ನಟಿಸಿದ್ದಾರೆ,

ಚಿತ್ರದ ನಾಯಕನಾಗಿ ಪ್ರಪುಲ್ ಸುರೇಂದ್ರ ನಟಿಸಿದ್ದು, ನಾಯಕಿ ಪಾತ್ರದಲ್ಲಿ ಮಾನಸಗೌಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸಂಗೀತ, ಮೈತ್ರಿ, ಸುನಿಲ್ ಬನವಾಶಿ, ಸಂಜು, ಮಾದೇಗೌಡ ಹೆಗ್ಗಡದೇವನಕೋಟೆ, ಮನೋಜ್ ಷಡಕ್ಷರಿ, ರವಿಕುಮಾರ್ S. ಗೆಂಡೆ, ದೀಪ, ಖುಷಿ, ಸೇರಿದಂತೆ ಸಾಕಷ್ಟು ಯುವ ಕಲಾವಿದರ ತಾರಾಬಳಗವನ್ನು ಈ ಚಿತ್ರ ಒಳಗೊಂಡಿದೆ.
ಸಮೃದ್ಧಿ ರಾಘವೇಂದ್ರ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಶಿಧರ್ ಎ. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಕೊಟ್ರೇಶ್. ಪಾ. ಅರುಣಾ ಅವರ ಛಾಯಾಗ್ರಹಣ. ಮಾದೇಗೌಡ ಹೆಗ್ಗಡದೇವನ ಕೋಟೆ, ಮನೋಜ್ ಷಡಕ್ಷರಿ. ರವಿ ಶೇರ್ ಬಹದ್ದೂರ್ ಅವರ ಸಹಾಯಕ ನಿರ್ದೇಶನ, ಅತೀಶಯ್ ಜೈನ್ ಅವರ ಸಂಗೀತ ನಿರ್ದೇಶನ, ಗಿರೀಶ್.ಎ.ಪಿ ಅವರ ಸಾಹಸ,
ಸುಧಾಕರ್ ಗಂಗಾವತಿ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

RELATED ARTICLES

Most Popular

Share via
Copy link
Powered by Social Snap