ಶರಣ್ ನಟನೆಯ ‘ಗುರು ಶಿಷ್ಯರು’ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.
ಶರಣ ಹಳ್ಳಿ ಶಾಲೆಯ ಪಿಟಿ ಮೇಸ್ಟ್ರಾಗಿ, ಶಾಲಾ ಮಕ್ಕಳಿಗೆ ಖೋ ಖೋ ಹೇಳಿಕೊಡುವ ಚಿತ್ರಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ. ಒಂದು ಸ್ಪೂರ್ತಿದಾಯಕ ಕಥೆ ಇನ್ನೊಂದೆಡೆ ನಿಧಾನವಾಗಿ ನಶಿಸಿ ಹೋಗುತ್ತಿರುವ ಖೋಖೋ ಕ್ರೀಡೆಯ ಮಹತ್ವವನ್ನು ಸಾರುವ ಚಿತ್ರವನ್ನು ನೂರಾರು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಂದ “ಗುರು ಶಿಷ್ಯರು” ವೀಕ್ಷಣೆ.


“ಗುರು ಶಿಷ್ಯರು” ಚಿತ್ರವನ್ನು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವರಾದ ಆರ್ ಅಶೋಕ್, ಶಾಸಕರಾದ ಎಂ.ಕೃಷ್ಣಪ್ಪ, ಡಿ.ಎಸ್ ಮ್ಯಾಕ್ಸ್ ನ ದಯಾನಂದ್, ಉದ್ಯಮಿ ಲೋಕೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಿ.ಮರಿಸ್ವಾಮಿ, ಮಾಜಿ ಕಾರ್ಪೊರೇಟರ್ ಹನುಮಂತಯ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ವೀಕ್ಷಿಸಿದರು.
ಚಿತ್ರದ ವೀಕ್ಷಣೆಯ ನಂತರ ದೇಸಿ ಕ್ರೀಡೆ ಖೊಖೊ ಆಟದ ಕಥೆಯನ್ನು ಆಧರಿಸಿರುವ ಈ ಚಿತ್ರವನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಚಿತ್ರಕ್ಕೆ ತರುಣ್ ಸುಧೀರ್ ಹಾಗೂ ಶರಣ್ ಕೃಷ್ಣ ನಿರ್ಮಾಣದ, ಜಡೇಶ್ ಕೆ ಹಂಪಿ ನಿರ್ದೇಶನವಿದೆ.



