ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರದ ಟ್ರೇಲರ್ ದೊಡ್ಡ ಮಟ್ಟದ ಹಿಟ್ ಆಗಿದೆ. ಎಲ್ಲೆಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದೆ. ಈಗ ರಿಲೀಸ್ ಹೊಸ್ತಿಲಿನಲ್ಲಿ ಚಿತ್ರವಿದ.


ಚಿತ್ರಕ್ಕೆ ಸೆನ್ಸಾರ್ ಮಂಡಳಿ ʼಯುʼ ಸರ್ಟಿಫಿಕೇಟ್ ನೀಡಿದೆ. 2 ಗಂಟೆ 40 ನಿಮಿಷ ಈ ಚಿತ್ರವಿದೆ. ಯಾವುದೇ ಕಟ್, ಮ್ಯೂಟ್ ಗಳಿಲ್ಲದೇ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದ್ದು, ಚಿತ್ರ ತಂಡದ ಹರ್ಷಕ್ಕೆ ಕಾರಣವಾಗಿದೆ.


ಚಿತ್ರವನ್ನು ನೋಡಿದ ಬಳಿಕ ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರವನ್ನು ಮೆಚ್ಚಿಕೊಂಡು, ಚಿತ್ರದ ಯಶಸ್ಸಿಗೆ ಹಾರೈಸಿದ್ದಾರೆ.
ʼಗುರು ಶಿಷ್ಯರು’ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ ಸಂಸ್ಥೆಗಳಡಿ ಜಂಟಿಯಾಗಿ ನಿರ್ಮಿಸಲಾಗಿದೆ. ಚಿತ್ರ ಸೆ.23 ರಂದು ತೆರೆಗೆ ಬರಲಿದೆ. ಗ್ರಾಮೀಣ ಭಾಗದ ಊರಿನಲ್ಲಿ ಖೋ – ಖೋ ಕ್ರೀಡೆಯನ್ನಿಟ್ಟುಕೊಂಡು ಚಿತ್ರದ ಕಥ ಸಾಗುತ್ತದೆ.


ಚಿತ್ರದಲ್ಲಿ ಶರಣ್ ಪಿ.ಟಿ ಮೇಸ್ಟ್ರಾಗಿ ಕಾಣಿಸಿಕೊಂಡಿದ್ದಾರೆ.
ನಿಶ್ವಿಕಾ ನಾಯ್ಡು, ದತ್ತಣ್ಣ, ಸುರೇಶ್ ಹೆಬ್ಳೀಕರ್, ಅಪೂರ್ವ ಕಾಸರವಳ್ಳಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೃದಯ್, ‘ನೆನಪಿರಲಿ’ ಪ್ರೇಮ್ ಮಗ ಏಕಾಂತ್, ರವಿಶಂಕರ್ ಗೌಡ ಮಗ ಸೂರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಮತ್ತು ಬುಲೆಟ್ ಪ್ರಕಾಶ್ ಮಗ ರಕ್ಷತ್ ನಟಿಸಿದ್ದಾರೆ.


ಜಡೇಶ್ ಹಂಪಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾಸ್ತಿ ಮಂಜು ಅವರ ಸಂಭಾಷಣೆ, ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಮತ್ತು ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.

