ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಆಧಾರಿತ ʼಗುರು ಶಿಷ್ಯರುʼ ಚಿತ್ರ ರಿಲೀಸ್ ಗೆ ರೆಡಿಯಾಡಿದೆ. ಪಿಟಿ ಮೇಸ್ಟ್ರು ಆಗಿ ಕಾಣಿಸಿಕೊಂಡಿರುವ ಶರಣ್ ಟ್ರೇಲರ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.


ಖೋ- ಖೋ ಕ್ರೀಡೆ ಹಾಗೂ ಊರಿನ ಹಿನ್ನೆಲೆಯೊಂದಿಗೆ ಸಾಗುವ ಕಥೆಯಲ್ಲಿ ಒಂದು ಮುದ್ದಾದ ಹಳ್ಳಿ ಪ್ರೇಮ ಕಥೆಯೂ ಇದ್ದು, ನಿಶ್ವಿಕಾ ಶರಣ್ ಅವರಿಗೆ ಇದರಲ್ಲಿ ಜೋಡಿಯಾಗಿದ್ದಾರೆ. ಚಿತ್ರದ ʼಆಣೆ ಮಾಡಿ ಹೇಳುತ್ತೀನಿʼ ಎನ್ನುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪ್ರೇಮಿಗಳ ಪಾಲಿನ ಮೆಚ್ಚಿನ ಹಾಡಾಗಿ ಬದಲಾಗಿದೆ.


ಇದೀಗ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಚೇತನ್ ಕುಮಾರ್ ಸಾಹಿತ್ಯ ಬರೆದಿರುವ ಹಾಡಿಗೆ ಕೈಲಾಸ್ ಖೇರ್ ಧ್ವನಿಯಾಗಿದ್ದಾರೆ. ʼನಡೆ ಮುಂದೆʼ ಎನ್ನುತ್ತಾ ಹಳ್ಳಿ ಮಕ್ಕಳ ಖೋ – ಖೋ ಪಯಣವನ್ನು ಸ್ಪೂರ್ತಿದಾಯಕವಾಗಿ ಹಾಡಿನಲ್ಲಿ ತೋರಿಸಲಾಗಿದೆ.
ಹಾಡು ರಿಲೀಸ್ ಆಗಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು, ಯೂಟ್ಯೂಬ್ 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈಗಾಗಲೇ ಹಾಡು ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಇದೇ ಸೆ.23 ರಂದು ಚಿತ್ರ ತೆರೆಗೆ ಬರಲಿದೆ.

