HomeReviewಮಾಸ್ ಗು ಸೈ, ಕ್ಲಾಸ್ ಗು ಸೈ ಈ ಪೊಲೀಸ್ ಆಫೀಸರ್! ಹೇಗಿದೆ 'ಗುರುದೇವ್ ಹೊಯ್ಸಳ'?

ಮಾಸ್ ಗು ಸೈ, ಕ್ಲಾಸ್ ಗು ಸೈ ಈ ಪೊಲೀಸ್ ಆಫೀಸರ್! ಹೇಗಿದೆ ‘ಗುರುದೇವ್ ಹೊಯ್ಸಳ’?

ನಮ್ ಟಾಕೀಸ್.ಇನ್ ರೇಟಿಂಗ್ 【4/5】

ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ, ವಿಜಯ್ ನಾಗೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಗುರುದೇವ್ ಹೊಯ್ಸಳ’ ಇಂದು(ಮಾರ್ಚ್ 30) ಎಲ್ಲೆಡೆ ಬಿಡುಗಡೆಯಾಗಿದೆ. ಎರಡನೇ ಬಾರೀ ಜೊತೆಯಾಗಿ ಬರುತ್ತಿದ್ದ ‘ಕೆ ಆರ್ ಜಿ ಸ್ಟುಡಿಯೋಸ್’ ಹಾಗು ಡಾಲಿ ಧನಂಜಯ ಜೋಡಿಯ ಮೇಲೆ ಕನ್ನಡ ಸಿನಿಪ್ರೇಮಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು. ಸದ್ಯ ಸಿನಿಮಾ ತೆರೆಕಂಡಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ, ಜನರಿಂದ ಪ್ರಶಂಸೆಗಳನ್ನೂ ಪಡೆಯುತ್ತಿದೆ. ಹಾಗಾದರೆ ಹೇಗಿದೆ ಸಿನಿಮಾ?ಡಾಲಿ ಧನಂಜಯ ಅವರಿಗೆ :ನಟರಾಕ್ಷಸ’ ಎಂಬ ಬಿರುದನ್ನು ಕನ್ನಡಿಗರು ನೀಡಿದ್ದಾರೆ. ಅದಕ್ಕೆ ತಕ್ಕದಾಗಿ ಡಾಲಿ ಪ್ರತೀ ಸಿನಿಮಾದಲ್ಲೂ ನಟಿಸುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ‘ಗುರುದೇವ್ ಹೊಯ್ಸಳ’ ಚಿತ್ರದಲ್ಲೂ ಕೂಡ ಡಾಲಿಯ ಛಾಪೇ ಒಂದು ಶಕ್ತಿಯಂತೆ. ಒಂದು ಪ್ರಮುಖ ಕೇಸ್ ನ ತನಿಖೆಗೆ ಬೆಂಗಳೂರಿನಿಂದ ಬೆಳಗಾವಿ ಗೆ ವರ್ಗಾವಣೆಯ ಮೇಲೆ ಬರುವ ಪೊಲೀಸ್ ಅಧಿಕಾರಿ ‘ಗುರುದೇವ್ ಹೊಯ್ಸಳ’ನ ಪಾತ್ರದಲ್ಲಿ ನಾಯಕ ಡಾಲಿ ಧನಂಜಯ ನಟಿಸಿದ್ದಾರೆ. ಅಲ್ಲಿ ಅವರಿಗೆ ಎದುರಾಗುವ ಸವಾಲುಗಳು, ಎದುರಾಳಿಗಳು, ಅದನ್ನ ನಮ್ಮ ‘ಗುರುದೇವ್ ಹೊಯ್ಸಳ’ ಹೇಗೆಲ್ಲ ಎದುರಿಸುತ್ತಾರೆ? ಎಂಬುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಇವರಿಗೆ ನಾಯಕಿಯಾಗಿ ಅಮೃತ ಐಯೆಂಗಾರ್ ನಟಿಸಿದ್ದು, ಇಬ್ಬರ ಜೋಡಿ ಮುದ್ದಾಗಿ ಕಾಣಿಸುತ್ತದೆ. ನಾಯಕನಿಗೆ ಎದುರಾಲಿಯಾಗಿ ನಿಲ್ಲುವ, ಆಂಡ್ರೆವ್ಸ್ ಅವಿನಾಶ್ ಅವರ ‘ದಾದಾ’ ಪಾತ್ರ, ಪ್ರತಾಪ್ ನಾರಾಯಣ್ ಅವರ ‘ನಾನಾ’ ಪಾತ್ರ ಹಾಗು ಮುಖ್ಯವಾಗಿ ನವೀನ್ ಶಂಕರ್ ಅಭಿನಯದ ‘ಬಲಿ’ ಪಾತ್ರಗಳೇ ಕಥೆಯ ಪ್ರಮುಖ ಅಂಶಗಳಾಗಿ ಮೂಡಿಬಂದಿವೆ. ವಿಶೇಷವಾಗಿ ಅತಿಸೂಕ್ಷ್ಮವಾಗಿ ಜಾತಿಯ ಭೇದ ಭಾವಗಳ ಬಗೆಗಿನ ಸಂದೇಶ ಸಿನಿಮಾದಲ್ಲಿದೆ.ಧನಂಜಯ ಅವರ ನಟನೆ ಎಂದಿನಂತೆ ಗಮನ ಸೆಳೆದರೂ, ಅಷ್ಟೇ ಸಮನಾದ ಪ್ರಶಂಸೆ ಸಲ್ಲುವುದು ನವೀನ್ ಶಂಕರ್ ಅವರಿಗೆ. ‘ಗುಳ್ಟು’ ಸಿನಿಮಾ ಖ್ಯಾತಿಯ ನವೀನ್ ಈ ಚಿತ್ರದಲ್ಲಿ ‘ಬಲಿ’ ಎಂಬ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದು, ಪ್ರಭುದ್ಧ ನಟನೆಯನ್ನ ಪ್ರದರ್ಶಿಸಿದ್ದಾರೆ. ವಿಜಯ್ ನಾಗೇಂದ್ರ ಅವರ ಚಾಣಕ್ಷ ನಿರ್ದೇಶನ ಪ್ರೇಕ್ಷಕರನ್ನ ಹಿಡಿದಿಡುತ್ತದೆ. ಅಲ್ಲದೇ ಎಲ್ಲರ ಗಮನ ಸೆಳೆದಿದ್ದು, ಮಾಸ್ತಿ ಅವರ ಸಂಭಾಷಣೆ. ಏಟಿಗೆ ಎದುರೇಟು ಎನ್ನುವಂತಿರುವ ಈ ಡೈಲಾಗ್ ಗಳು ಹಾಗು ಕನ್ನಡ ಪ್ರೇಮದ ಬಗ್ಗೆ ಅಂದವಾಗಿ ಹೇಳಿರುವ ಡೈಲಾಗ್ ಗಳು ಸಿನಿಪ್ರಿಯರ ಮನಗೆದ್ದಿವೆ. ಇನ್ನು ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿರುವ ಮತ್ತೊಂದು ಪಾಸಿಟಿವ್ ಪಾಯಿಂಟ್. ಚಿತ್ರದ ಹಾಡುಗಳು ಹಾಗು ಹಿನ್ನೆಲೆ ಸಂಗೀತ ವಿಭಿನ್ನವಾಗಿದ್ದು, ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಭರ್ಜರಿ ಆಕ್ಷನ್ ಜೊತೆಗೆ, ಒಳ್ಳೆಯ ಮನೋರಂಜನೆ ಹಾಗು ಸೂಕ್ಷ್ಮ ಸಂದೇಶ ಸಾರುವ ಒಂದೊಳ್ಳೆ ಕಥೆ ಹೊಂದಿರುವ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ‘ಗುರುದೇವ್ ಹೊಯ್ಸಳ’ ಹೊರಹೊಮ್ಮಿದೆ. ಎಲ್ಲರ ಪ್ರಶಂಸೆ ಪಡೆದು, ನಿರೀಕ್ಷೆಗಳಿಗೆ ತಕ್ಕ ಉತ್ತರ ನೀಡುತ್ತಿದೆ.

ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ, ವಿಜಯ್ ಎನ್ ಅವರ ನಿರ್ದೇಶನದಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹೊತ್ತುಕೊಂಡು ಬಿಡುಗಡೆಯಾಗಿದ್ದ ಸಿನಿಮಾ ‘ಗುರುದೇವ್ ಹೊಯ್ಸಳ’. ‘ರತ್ನನ್ ಪ್ರಪಂಚ’ ಚಿತ್ರ ನೀಡಿದ್ದ ಡಾಲಿ ಹಾಗು ಕೆ ಆರ್ ಜಿ ಜೋಡಿಯಿಂದ ಬಂದ ಎರಡನೇ ಸಿನಿಮಾ ಇದಾಗಿದ್ದರಿಂದ ಮತ್ತೊಂದು ಒಳ್ಳೆಯ ಸಿನಿಮಾದ ಪ್ರತೀಕ್ಷೆಯಲ್ಲಿ ಪ್ರೇಕ್ಷಕರಿದ್ದರು. ಸದ್ಯ ಹುಟ್ಟಿಸಿದ ಎಲ್ಲಾ ನಿರೀಕ್ಷೆಗಳಿಗೂ ಸೆಡ್ಡು ಹೊಡೆಯುವಂತೆ ಸಿನಿಮಾ ಮೂಡಿಬಂದಿದೆ. ಎಲ್ಲಾ ನೋಡುಗರಿಂದ ಫುಲ್ ಮಾರ್ಕ್ಸ್ ಪಡೆಯುತ್ತಾ ಬ್ಲಾಕ್ ಬಸ್ಟರ್ ಎಂಬ ಬಿರುದು ತನ್ನದಾಗಿಸಿಕೊಳ್ಳುತ್ತಿದೆ.

RELATED ARTICLES

Most Popular

Share via
Copy link
Powered by Social Snap