ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಆರ್.ವಿ.ಗುರುಪಾದಂ ಅವರ ಜಿಆರ್ ಪಿ ಆರ್ಟ್ಸ್ 45 ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾಕ್ಕೆ ಬಂಡವಾಳ ಹಾಕಲು ಮುಂದಾಗಿತ್ತು. ಆದರೆ ವಿಧಿಯಟ ಎಂಬಂತೆ ಖ್ಯಾತ ನಿರ್ಮಾಪಕ ಆರ್.ವಿ.ಗುರುಪಾದಂ ಹೃದಯಾಘಾತದಿಂದ ಇಂದು ಮುಂಜಾನೆ( ಶನಿವಾರ) ನಿಧನರಾಗಿದ್ದಾರೆ.
ಯಾವೆಲ್ಲಾ ಸಿನಿಮಾಕ್ಕೆ ನಿರ್ಮಾಣ ಮಾಡಿದ್ದರು:
ಕಳೆದ ನಾಲ್ಕು ದಶಕಗಳಿಂದ ಹತ್ರ ಹತ್ರ 25 ಸಿನಿಮಾಗಳಿಗೆ ನಿರ್ಮಾಣ ಮಾಡಿರುವ ಸಂಸ್ಥೆ ಈ ಹಿಂದೆ
ಭಾರತಿ, ವಿಷ್ಣುವರ್ಧನ್ ಅವರ
‘ನಾನಿರುವುದೇ ನಿನ್ನಗಾಗಿ’, ಅಂಬರೀಶ್, ಅಂಬಿಕಾ ಅವರ ‘ಚದುರಂಗ’, ಕನ್ನಡ ಸಿನಿಮಾಗಳಿಗೆ ಬಂಡವಾಳ ಹಾಕಿತ್ತು.
ಕಮಲ್ ಹಾಸನ್ – ಜಯಸುಧಾ ಅವರ ‘ಇರು ನಿಲುವುಗಲ್’, ಟಿ.ರಾಜೇಂದರ್- ಜ್ಯೋತಿ ಅಭಿನಯದ ‘ರಾಲಿ ಪಯಣಗಾಲಿ’ , ಶಿವಕುಮಾರ್ , ಸುಜಾತ ನಟನೆಯ ‘ಕರ್ಪೂರ ದೀಪಂ’ ಇನ್ನು ಅನೇಕ ತಮಿಳು ಸಿನಿಮಾವನ್ನು ನಿರ್ಮಾಣ ಮಾಡಿದೆ.


ಜೀವಿಕನ್ ಪಡಿಕ್ಕಾನಂ ಕಮಲಹಾಸನ್, ಜಯಸುಧಾ ಮಲಯಾಳಂ ಸಿನಿಮಾ.ಕಮಲಹಾಸನ್ ಮತ್ತು ಜಯಸುಧಾ ಅಭಿನಯದ ‘ಸೋಮ ಒಕ್ಕದುಧಿ, ಸೋಕೋ ಒಕ್ಕದುಧಿ’, ಎನ್ ಟಿ ಆರ್/ಕೃಷ್ಣ/ಶ್ರೀದೇವಿ/ರಾಧಿಕಾ ಅಭಿನಯದ ‘ಒಯಾರಿ ಭಾಮಳು, ಒಗಲಮಾರಿ ಬಂದಳು’, ಕೃಷ್ಣಾರ್ತಿರಾಜು/ಚಿರಂಜೀವಿ/ಜಯಪ್ರದ/ರಾಧಿಕಾ ಅಭಿನಯದ ‘ಪುಲಿ ಬೆಬ್ಬುಳ್ಳಿ’ ತೆಲುಗು ಸಿನಿಮಾಗಳನ್ನು ನಿರ್ಮಿಸಿದ್ದರು.
ಬಾಲಿವುಡ್ ನಲ್ಲಿ ಜಿತೇಂದ್ರ ಮತ್ತು ಶ್ರೀದೇವಿ ಅಭಿನಯದ ‘ಅಕಲ್ಮಂಡ್’ ,ಗೋವಿಂದ/ಶತ್ರುಗನ್ ಸಿನ್ಹಾ, ಪೂನಂ ದಿಲ್ಹೋನ್ ಅಭಿನಯದ ‘ಮೊಹಬತ್ ಕಿ ಆಗ್’, ‘ಮಿಸ್ ಇಂಡಿಯಾ’, ‘ಶಿರ್ಡಿ ಸತ್ಯ ಸಾಯಿ ಬಾಬಾ’ ಇನ್ನು ಅನೇಕ ಸಿನಿಮಾಗಳಿಗೆ ಬಂಡವಾಳ ಹಾಕಿದ್ದರು.
ಇನ್ನು 45 ವರ್ಷದ ಬಳಿಕ ಶ್ರೀಮುರಳಿ , ಶಿವಣ್ಣ ಅವರ ಸಿನಿಮಾಗಳಿಗೆ ಬಂಡವಾಳ ಹಾಕಲು ಮುಂದಾಗಿತ್ತು, ಶಿವರಾಜ್ ಕುಮಾರ್ ಯೊಂದಿಗೆ ಈಗಾಗಲೇ ಮಾತುಕತೆಯನ್ನೂ ನಡೆಸಿತ್ತು.



