ಶ್ರೀನಗರ ಕಿಟ್ಟಿ ಅವರ ‘ಗೌಳಿ’ ಚಿತ್ರ ಶೂಟಿಂಗ್ ಹಂತದಲ್ಲೇ ಸದ್ದು ಮಾಡಿದ ಸಿನಿಮಾ. ಶ್ರೀನಗರ ಕಿಟ್ಟಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಈಗಾಗಲೇ ಸಿನಿಕಾ ತಂಡ ಟೀಸರ್ ಹಾಗೂ ‘ಮಹಾರಕ್ಕಸ’ ಹಾಡನ್ನು ಬಿಡುಗಡೆ ಮಾಡಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ.ಅದ್ಧೂರಿ ಮೇಕಿಂಗ್, ಅಮೋಘ ದೃಶ್ಯದಿಂದಲೂ ಸಿನಿಮಾ ಗಮನ ಸೆಳೆದಿದೆ.
ಸಿನಿಮಾದ ಡಬ್ಬಿಂಗ್ ಹಾಗೂ ಸ್ಯಾಟಲೈಟ್ ರೈಟ್ಸ್ ದೊಡ್ಡ ಮಟ್ಟದಲ್ಲಿ ಸೇಲ್ ಆಗಿದೆ. ಉತ್ತರ ಕರ್ನಾಟಕದ ಸೊಗಡಿನ ಕಥೆಯಾಗಿರುವುದರಿಂದ ಶಿರಸಿ, ಯಲ್ಲಾಪುರ, ಹೊನ್ನಾವರ ಹಾಗೂ ಹುಬ್ಬಳ್ಳಿ ಮುಂತಾದ ಕಡೆ ಸಿನಿಮಾದ ಚಿತ್ರೀಕರಣವಾಗಿದೆ.
ರಘು ಸಿಂಗಂ ಸೋಹನ ಫಿಲಂ ಫ್ಯಾಕ್ಟರಿ ಎಂಬ ಬ್ಯಾನರ್ ನಡಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಸೂರ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಫೆ.24 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ತಂಡ ಹೇಳಿದೆ.
ನಾಯಕಿ ಪಾವನಗೌಡ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಮುಂತಾದವರು ನಟಿಸಿದ್ದು, ಎಲ್ಲರೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಶಶಾಂಕ್ ಶೇಷಗಿರಿ ಅವರ ಸಂಗೀತ,ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ,ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂ ಮೋರ್, ಅರ್ಜುನ್ ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

