ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಹಲವಾರು ಆಫರ್ ಗಳು ಬರುತ್ತಿವೆ. ಈಗಾಗಲೇ ಅವರು ಕೆಲ ಚಿತ್ರಗಳು ಅನೌನ್ಸ್ ಆಗಿವೆ. ಈ ಸಾಲಿನಲ್ಲಿ ‘ಗುಡ್ ಬೈ’ ಸಿನಿಮಾವೂ ಒಂದು.
ಚಿತ್ರ ಸಟ್ಟೇರಿದ ದಿನದಿಂದ ಸಾಕಷ್ಟು ಸದ್ದು ಮಾಡಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ರಶ್ಮಿಕಾ ಕಾಣಸಿಕೊಳ್ಳುತ್ತಿರುವುದು, ರಶ್ಮಿಕಾ ಅವರ ಅದೃಷ್ಟ.
ಈಗ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಕ್ಟೋಬರ್ 7 ಸಿನಿಮಾ ತೆರೆಗೆ ಬರಲಿದೆ. ಸಿನಿಮಾದಲ್ಲಿ ರಶ್ಮಿಕಾ – ಅಮಿತಾಭ್ ತಂದೆ – ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಪೋಸ್ಟರ್ ರಿಲೀಸ್ ಮಾಡಿ, ರಿಲೀಸ್ ಡೇಟ್ ಮಾಡಿದೆ ಚಿತ್ರ ತಂಡ. ಅಮಿತಾಭ್ ಗಾಳಿಪಟ ಹಾರಿಸುತ್ತಾ, ರಶ್ಮಿಕಾ ನಗುಮುಖದಲ್ಲಿ ಅಮಿತಾಭ್ ಹಿಂದೆ ಕಾಣಿಸಿಕೊಂಡಿದ್ದಾರೆ.
ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ, ‘ಅಪ್ಪ ಮತ್ತು ನಾನು ನಿಮ್ಮ ಕುಟುಂಬವನ್ನು ಭೇಟಿ ಆಗಲು ಅಕ್ಟೋಬರ್ 7ರಂದು ಬರುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
‘ಗುಡ್ ಬೈ’ ಆದ ಬಳಿಲ ರಶ್ಮಿಕಾ ಬಾಲಿವುಡ್ ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’, ಹಾಗೂ ಅನಿಲ್ ಕಪೂರ್ ಅವರೊಂದಿಗೆ ‘ಅನಿಮಲ್’ ಚಿತ್ರ ಕಾಣಿಸಿಕೊಳ್ಳಲಿದ್ದಾರೆ.

