‘ಮುಂಗಾರು ಮಳೆ’ ಹುಡುಗ ಗೋಲ್ಡನ್ ಸ್ಟಾರ್ ಗಣೇಶ್ ಬಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರ?
ಹೀಗೊಂದು ಪ್ರಶ್ನೆ ಮೂಡಲು ಕಾರಣ ಗಣೇಶ್ ಅವರ ಹೊಸ ಪೋಸ್ಟ್. ಪ್ರೀತಂ ಗುಬ್ಬಿ ಅವರ ‘ಬಾನದಾರಿಯಲಿ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಗಣೇಶ್ ಈಗ ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆವೊಂದಕ್ಕೆ ಹೋಗಲಿದ್ದಾರೆ.
ಬಾಲಿವುಡ್ ನ ಪ್ರತಿ ಸಿನಿಮಾಕ್ಕೆ ಪ್ರಚಾರಕ್ಕೆ ಮೊದಲ ಆಯ್ಕೆಯಾಗಿ ಬರುವ ಜನಪ್ರಿಯ ಕಾರ್ಯಕ್ರಮ ‘ಕಪಿಲ್ ಶರ್ಮಾ ಶೋ’ ದಲ್ಲಿ ಈ ಹಿಂದೆ ಕಿಚ್ಚ ಸುದೀಪ್ ಅವರು ಎರಡು ಬಾರಿ ಭಾಗವಹಿಸಿದ್ದರು. ‘ಪೈಲ್ವಾನ್’ ಚಿತ್ರದ ವೇಳೆ ಸುನಿಲ್ ಶೆಟ್ಟಿ ಅವರೊಂದಿಗೆ ಹಾಗೂ ಸಲ್ಮಾನ್ ಖಾನ್ ಅವರೊಂದಿಗೆ.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲೆ ಎಲ್ಲಾ ಸಿನಿಮಾ ರಂಗದವರು ಬೇರೆ ಸಿನಿ ಪ್ರೇಕ್ಷಕರಿಗೆ ತಲುಪಲು ಆಯಾ ಭಾಷೆಯ ಟಿವಿ ಕಾರ್ಯಕ್ರಮ, ಸಂದರ್ಶನಗಳನ್ನು ಸಾಮಾನ್ಯ. ಈಗ ಈ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಸೇರಲಿದ್ದಾರೆ.
ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದು ಮೇಕಪ್ ಮಾಡಿಕೊಂಡು, ಕಾರು ಹತ್ತಿ ಬಾಂಬೆ ಹೋಗಿ ಕಪಿಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕೊನೆಯಲ್ಲಿ ‘ಆಸಕ್ತಿಕರವಾದ ವಿಷಯವೊಂದು ಶೀಘ್ರದಲ್ಲಿಯೇ ನಿಮ್ಮ ಮುಂದೆ ಬರಲಿದೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಅಭಿಮಾನಿಗಳು ಏನಿರಬಹುದು. ಗಣಿ ಏನಾದರು ಬಾಲಿವುಡ್ ಗೆ ಕಾಲಿಡಲಿದ್ದಾರ? ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರ? ಎನ್ನುವ ಕುತೂಹಲಕಾರಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ.

