1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಗ್ಲೋಬಲ್ ಮಟ್ಟದಲ್ಲಿ ದೊಡ್ಡ ಹಿಟ್ ಆದ ಎಸ್.ಎಸ್. ರಾಜಾಮೌಳಿ ಅವರ ʼಆರ್ ಆರ್ ಆರ್ʼ ಸಿನಿಮಾ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದನ್ನು ಗೆದ್ದಿದೆ.
ಆರ್ ಆರ್ ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿದೇಶಿ ( ನಾನ್ ಇಂಗ್ಲೀಷ್) ಸಿನಿಮಾ ಹಾಗೂ ಬೆಸ್ಟ್ ಒರಿಜಿನಲ್ ಸಾಂಗ್ ( ನಾಟು ನಾಟು) ವಿಭಾಗದಲ್ಲಿ ನಾಮಿನೇಟ್ ಆಗಿತ್ತು.
ಬುಧವಾರ ಮುಂಜಾನೆ ಈ ಪ್ರಶಸ್ತಿ ಗೆದ್ದ ಪಟ್ಟಿ ರಿಲೀಸ್ ಆಗಿತ್ತು. ಆರ್ ಆರ್ ಆರ್ ಚಿತ್ರದ ʼನಾಟು ನಾಟುʼ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಆ ಮೂಲಕ ಭಾರತಕ್ಕೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಗರಿ ಸಿಕ್ಕಿದೆ.
ವೇರ್ ದಿ ಕ್ರಾಡಾಡ್ಸ್ ಸಿಂಗ್ ಸಿನಿಮಾದ ಟೇಲರ್ ಸ್ವಿಫ್ಟ್ ಹಾಡಿರುವ ‘ಕ್ಯಾರೊಲಿನಾ’, ಗಿಲ್ಲೆರ್ಮೊ ಡೆಲ್ ಟೊರೊ ನಿರ್ದೇಶನ ಪಿನೋಚ್ಚಿಯೋ ಚಿತ್ರದ ʼಸಿಯೋ ಪಾಪಾʼ ಲೇಡಿ ಗಾಗಾ ಹಾಡಿರುವ ʼಟಾಪ್ ಗನ್ʼ ಚಿತ್ರದ ‘ಹೋಲ್ಡ್ ಮೈ ಹ್ಯಾಂಡ್’ ಮಾವೆರಿಕ್ ಮತ್ತು ರಿಹಾನ್ನಾ ಹಾಡಿರುವ ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ʼ ಸಿನಿಮಾದ ʼಲೆಫ್ಟ್ ಮಿ ಅಪ್ʼ ಹಾಡುಗಳೊಂದಿಗೆ ಸ್ಪರ್ಧೆ ಮಾಡಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಆರ್ ಆರ್ ಆರ್ ಚಿತ್ರ ತಂಡ ಗೆದ್ದುಕೊಂಡಿದೆ.
ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಎಂಎಂ ಕೀರವಾಣಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

