HomeNews'ಘೋಸ್ಟ್'ಗೆ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಎಂಟ್ರಿ

‘ಘೋಸ್ಟ್’ಗೆ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಎಂಟ್ರಿ

ಶ್ರೀನಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷ‌ನ್ ನಲ್ಲಿ ಬರುತ್ತಿರುವ ‘ಘೋಸ್ಟ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈಗಾಗಲೇ ಶೇ.60 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ, ಉಳಿದ 40% ಚಿತ್ರೀಕರಣದ ಶೆಡ್ಯೂಲನ್ನು ಫೆ.10 ರಿಂದ ಆರಂಭಿಸಲು ಯೋಜನೆಯನ್ನು ಚಿತ್ರ ತಂಡ ಹಾಕಿಕೊಂಡಿದೆ.

ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್, ದಕ್ಷಿಣ ಭಾರತದ ಜನಪ್ರಿಯ ನಟ ಜಯರಾಮ್ ಮತ್ತು ಪ್ರಶಾಂತ್ ನಾರಾಯಣನ್ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. 

ಇನ್ನು ಸಿನಿಮಾದಲ್ಲಿ ನಾಯಕಿ ಎನ್ನುವಂತಹ ಪಾತ್ರ ಇರುವುದಿಲ್ಲ ಎಂದು ಈ ಹಿಂದೆ ಚಿತ್ರ ತಂಡ ಹೇಳಿತ್ತು. ಇದೀಗ ಕೆಜಿಎಫ್ ಖ್ಯಾತಿಯ ‘ಹೊಂದಿಸಿ ಬರೆಯಿರಿ’ ನಟಿ ಆರ್ಚನಾ ಜೋಯಿಸ್ ಅವರನ್ನು ಸಿನಿಮಾದಲ್ಲಿನ ಪ್ರಮುಖ ಪಾತ್ರವೊಂದಕ್ಕೆ ಆಯ್ದುಕೊಂಡಿರುವ ವಿಚಾರವನ್ನು ಚಿತ್ರ ತಂಡ ಹೇಳಿದೆ.

ಈ ಬಗ್ಗೆ ಮಾತನಾಡುವ ‌ನಿರ್ದೇಶಕ ಶ್ರಿನಿ “‘ಅರ್ಚನಾ ಅವರು ಘೋಸ್ಟ್‌ನಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ ಮತ್ತು ಇಡೀ ಚಿತ್ರದಲ್ಲಿ ಅವರು ಕಾಣಿಸುತ್ತಾರೆ. ಅವರ ಪಾತ್ರವೇ ಸಸ್ಪೆನ್ಸ್ ಮತ್ತು ಟ್ವಿಸ್ಟ್ ಅನ್ನು ತರುತ್ತದೆ. ನಾನು ವಿಶಾಲ ವ್ಯಾಪ್ತಿಯ ಭಾವನೆಗಳೊಂದಿಗೆ ನಟಿಸಬಲ್ಲ ನಟಿಯನ್ನು ಬಯಸುತ್ತೇನೆ ಮತ್ತು ನಾವು ಅರ್ಚನಾ ಜೋಯಿಸ್ ಅವರನ್ನು ಉತ್ತಮವಾಗಿ ತೋರಿಸಿದ್ದೇವೆ. ಅವರು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಈ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ” ಎಂದು ಹೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ನಲ್ಲಿ ಚಿತ್ರೀಕರಣವನ್ನು ‌ಮುಗಿಸುವ ಪ್ಲ್ಯಾನ್ ಚಿತ್ರತಂಡ ಹಾಕಿಕೊಂಡಿದೆ.

ಸಂದೇಶ್ ಪ್ರೊಡಕ್ಷನ್ ನಿರ್ಮಾಣದ ಘೋಸ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ.

RELATED ARTICLES

Most Popular

Share via
Copy link
Powered by Social Snap