ʼವೇದʼ ಹಿಟ್ ಆದ ಸಂತಸದಲ್ಲಿರುವ ಶಿವಣ್ಣನ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅವರ ಮುಂದಿನ ಸಿನಿಮಾ ʼಫೋಸ್ಟ್ʼ ರೆಟ್ರೋ ಮೋಷನ್ ಪಿಕ್ಚರ್ ರಿಲೀಸ್ ಆಗಿದೆ.
ಶಿವಣ್ಣನ ಗೆಟಪ್ 90 ದಶಕದ ಗ್ಯಾಂಗ್ ಸ್ಟರ್ ನಂತೆ ಕಾಣುತ್ತಿದೆ. ಶ್ರೀನಿ ನಿರ್ದೇಶನದ ಸಿನಿಮಾದ ಕಥೆ ಕೂಡ 90 ದಶಕದ ಮಾಸ್, ಥ್ರಿಲ್ಲರ್ ಅಂಶಗಳನ್ನು ಹೊಂದಿದ್ದು, ಪಾತ್ರಕ್ಕೆ ತಕ್ಕ ಶಿವಣ್ಣ ಸಖತ್ ಆಗಿ ಯುವಕನಂತೆ ಮಿಂಚಿದ್ದಾರೆ.
ಕೋಟ್ ಹಾಕಿಕೊಂಡು, ಬೀಡಿ ಕಚ್ಚಿಕೊಂಡು ನಿಂತುಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ʼಓಂʼ ಸಿನಿಮಾದಲ್ಲಿನ ಲುಕ್ ನಂತೆ ಇಲ್ಲಿ ಕಾಣಿಸಿಕೊಂಡಿದ್ದಾರೆ.
‘ಒನ್ಸ್ ಎ ಗ್ಯಾಂಗ್‌ಸ್ಟರ್ ಆಲ್‌ವೇಸ್ ಎ ಗ್ಯಾಂಗ್‌ಸ್ಟರ್’ ಎಂಬ ಟ್ಯಾಗ್‌ಲೈನ್ ‘ಘೋಸ್ಟ್’ ಸಿನಿಮಾದ ಪೋಸ್ಟರ್‌ನಲ್ಲಿದೆ.
ಶಿವರಾಜ್ ಕುಮಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾದಲ್ಲಿ ನಟಿಸುತ್ತಿದ್ದು, ‘ಕ್ಯಾಪ್ಟನ್ ಮಿಲ್ಲರ್’, ‘ಬಾದ್ ಶಾ’ ಮುಂತಾದ ಸಿನಿಮಾದಲ್ಲಿ ನಟಿಸಲಿದ್ದಾರೆ.

