ಪವರ್ ಸ್ಟಾರ್ ಅಪ್ಪು ಅವರ ʼಗಂಧದ ಗುಡಿʼ ನಾಳೆ ಗ್ರ್ಯಾಂಡ್ ರಿಲೀಸ್ ಆಗಲಿದೆ. ನೂರಾರು ಅಭಿಮಾನಿಗಳು ಥಿಯೇಟರ್ ಮುಂದೆ ಕಟೌಟ್ ಗಳನ್ನು ಹಾಕಿ, ಜೈಕಾರ ಕೂಗಲು ರೆಡಿಯಾಗಿದ್ದಾರೆ. ಚಂದನವನದ ಸೇರಿದಂತೆ ಇಡೀ ಚಿತ್ರ ರಂಗ ಅಪ್ಪು ಕನಸಿನ ʼಗಂಧದ ಗುಡಿʼ ನೋಡಲು ಕಾಯುತ್ತಿದ್ದಾರೆ.
ಇತ್ತೀಚೆಗಷ್ಟೇ ಅಮೋಘವರ್ಷ ನಿರ್ದೇಶನ ʼಗಂಧದ ಗುಡಿʼ ಪ್ರಿ ರಿಲೀಸ್ ಇವೆಂಟ್ ನೆರವೇರಿತ್ತು. ಪ್ರಿಮಿಯರ್ ಶೋ ಇಂದಿನಿಂದಲೇ ( ಗುರವಾರದಿಂದಲೇ) ಆರಂಭವಾಗಿದೆ.
ಹೊಂಬಾಳೆ ಫಿಲ್ಮ್ಸ್ ಹಾಗೂ ವಿಜಯ್ ಕಿರಂಗದೂರು ʼಗಂಧದ ಗುಡಿʼ ಬಗ್ಗೆ ಟ್ವೀಟ್ ಮಾಡಿದೆ. ನಿಜ ಜೀವನದ ಹೀರೋ ನೋಡಲು ಎಲ್ಲರೂ ತಪ್ಪದೇ ‘ಗಂಧದಗುಡಿ’ವೀಕ್ಷಿಸಿ, ಮಕ್ಕಳನ್ನೂ ಕರೆದುಕೊಂಡು ಬನ್ನಿಯೆಂದು ಟ್ವೀಟ್ ಮಾಡಿದೆ.
ಕನ್ನಡಿಗರ ಕಣ್ಮಣಿ ʼಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ʼ ಅವರನ್ನು ಈವರೆಗೆ ನೀವೆಲ್ಲಾ ಚಲನಚಿತ್ರಗಳಲ್ಲಿ ಹೀರೋ ಆಗಿ ನೋಡಿ ಸಂಭ್ರಮಿಸಿದ್ದೀರಿ. ಆದರೆ ʼಅಪ್ಪುʼ ಅಭಿನಯದ ಕೊನೆಯ ಚಿತ್ರ ʼಗಂಧದ ಗುಡಿʼ ನೋಡಿದಾಗ ನಿಜಜೀವನದ ಹೀರೋ ಹೀಗೆ ಇರುತ್ತಾರೆ ಎಂದು ಗೊತ್ತಾಗುತ್ತೆ. ಎಲ್ಲ ಚಲನಚಿತ್ರಗಳಿಗಿಂತ ʼವಿಭಿನ್ನ ಮತ್ತು ವಿಶೇಷʼ. ನಿಜ ಜೀವನದ ನೋಡಲು ಎಲ್ಲರೂ ತಪ್ಪದೇ ʼಗಂಧದ ಗುಡಿʼ ವೀಕ್ಷಿಸಿ ಮಕ್ಕಳನ್ನೂ ಕರೆದುಕೊಂಡು ಬನ್ನಿ. ಕರುನಾಡ ಸೊಬಗಿನ ʼಗಂಧದ ಗುಡಿʼ ನವ ಪೀಳಿಗೆಗೆ ಸ್ಪೂರ್ತಿ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

