HomeNewsಅಪ್ಪು 'ಗಂಧದ ಗುಡಿ' ನೋಡಿ‌ ಡಿಬಾಸ್ ಏನಂದ್ರು ಕೇಳಿ

ಅಪ್ಪು ‘ಗಂಧದ ಗುಡಿ’ ನೋಡಿ‌ ಡಿಬಾಸ್ ಏನಂದ್ರು ಕೇಳಿ

ಡಿಬಾಸ್ ಫ್ಯಾನ್ಸ್ ಗಳು ‘ಕ್ರಾಂತಿ’ ಹಬ್ಬಕ್ಕಾಗಿ‌ ಕಾಯುತ್ತಿದ್ದಾರೆ. ಗ್ರಾಮ ಗ್ರಾಮದಲ್ಲೂ ಕ್ರಾಂತಿ ಪ್ರಚಾರ ರಥ ಸಂಚರಿಸುತ್ತಿದೆ.‌2023 ರ ಜನವರಿ 26 ರಂದು ಸಿನಿಮಾ ತೆರೆಗೆ ಬರಲಿದೆ.

ನಟ ದರ್ಶನ್ ಕೂಡ ‘ಕ್ರಾಂತಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಲವಾರು ಸಂದರ್ಶನವನ್ನು ನೀಡಿರುವ ದರ್ಶನ್ ಒಂದು ಸಂದರ್ಶನದಲ್ಲಿ ಅಪ್ಪು ‘ಗಂಧದ ಗುಡಿ’ ಬಗ್ಗೆ ಮಾತಾನಾಡಿದ್ದಾರೆ.

ಅಮೋಘವರ್ಷ ನಿರ್ದೇಶನದ ಸಾಕ್ಷ್ಯ ಚಿತ್ರ ‘ಗಂಧದ ಗುಡಿ’ ಭರ್ಜರಿ ಪ್ರದರ್ಶನ ಕಂಡಿತ್ತು. ನಾಡಿನ ಜೀವ ವೈವಿಧ್ಯತೆಯನ್ನು ಸಾರುವ ಚಿತ್ರದಲ್ಲಿ ಅಪ್ಪು ಅವರನ್ನು ‌ನೋಡಿ ಪ್ರೇಕ್ಷಕರು ಕಣ್ಣೀರು ಹಾಕಿದ್ದರು.

ಯಾವಾಗಲೂ ಜಂಗಲ್ ಸಫಾರಿ ಮಾಡುವ ಪ್ರಾಣಿ ಪ್ರಿಯ ದರ್ಶನ್ ಅವರು ‘ಗಂಧದ ಗುಡಿ’ಯನ್ನು ನೋಡಿಲ್ಲ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಬಂದಾಗ ಡಿಬಾಸ್ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ. ‘ಚೆನ್ನಾಗಿದೆ, ಇಟ್ಸ್ ಗುಡ್’ ಎಂದು ಹೇಳುವ ಮೂಲಕ ಸಿನಿಮಾವನ್ನು ‌ನೋಡಿಲ್ಲ ಎನ್ನುವವರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕಾಡು ಸುತ್ತೋಕೆ ಆಸಕ್ತಿಗಿಂತ ಒಲವು ಇರಬೇಕು. ಒಲವಿದ್ರೆ ನೀವು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದರು. ನಾನು ಸಹ ಕಾಡನ್ನು ಸುತ್ತುತ್ತೇನೆ, ಇಲ್ಲಿ ಆದರೆ ಜಿಮ್ ಇದೆಯಾ, ಎಸಿ ಬರುತ್ತಾ ಅಂತ ನೋಡ್ತೇವೆ ನಾವು, ಕಾಡಲ್ಲಿ ಎಸಿ ಏನೂ ಅಗತ್ಯವಿಲ್ಲ ಎಂದು ದರ್ಶನ್ ಕಾಡಿನಲ್ಲಿ ಕಾಲ ಕಳೆಯುವುದು ತಮಗಿಷ್ಟ ಎಂದರು.

RELATED ARTICLES

Most Popular

Share via
Copy link
Powered by Social Snap