ಅಮೋಘವರ್ಷ- ಅಪ್ಪು ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಾಡಿನ ಜೀವ ಸಂಪತ್ತನ್ನು ಸಾರುವ ‘ಗಂಧದ ಗುಡಿ’ ಯಲ್ಲಿ ಪವರ್ ಸ್ಟಾರ್ ಅವರನ್ನು ಕಂಡು ಭಾವುಕರಾಗಿದ್ದಾರೆ.
ಇತ್ತೀಚೆಗೆ ಸಿನಿಮಾದ ದರವನ್ನು ಕಡಿಮೆ ಮಾಡಲಾಗಿತ್ತು. ಈಗ ಸಾಕ್ಷ್ಯ ಚಿತ್ರದ ತೆರೆ ಹಿಂದಿನ ದೃಶ್ಯವನ್ನು ಬಿಡುಗಡೆ ಮಾಡಿದೆ.
ಪಿಆರ್ ಕೆ ಆಡಿಯೋಸ್ ನಲ್ಲಿ ಬಿಹೈಂಡ್ ದಿ ಸೀನ್ಸ್ , ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.
ಅಮೋಘವರ್ಷ, ಕ್ಯಾಮೆರಾಮನ್, ಸಂಗೀತ ನಿರ್ದೇಶಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಮೋಘವರ್ಷ ಅವರು ಮಾತಾನಾಡಿ, ಈ ಡಾಕ್ಯುಮೆಂಟರಿ ಆರಂಭವಾದಾಗ ಇದಕ್ಕೆ ಯಾವ ಹೆಸರನ್ನು ಇಟ್ಟಿರಲಿಲ್ಲ. ಆ ಬಳಿಕ ಹಾಗೆಯೇ ಸುಮ್ಮನೆ ‘ಜರ್ನಿ ಟು ರಿಮೆಂಬರ್’ ಎಂದು ಹೆಸರು ಇಟ್ಟಿದ್ದೀವಿ ಎಂದು ಹೇಳಿದ್ದಾರೆ.
ಇನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತಾನಾಡಿ “ಬಹಳ ಸಣ್ಣ ತಂಡದ ಜೊತೆ ಅವರು ಕಾಡಿನಲ್ಲಿ ಸುತ್ತುತ್ತಿದ್ದರು. ಪ್ರಾಜೆಕ್ಟ್‌ನ ನಡುವೆ ಅವರುಗಳು ಕಾಡಿನಲ್ಲಿ ತಡರಾತ್ರಿ ಓಡಾಡಬೇಕು, ಕಾಡಿನಲ್ಲಿ ಸ್ಟೇ ಮಾಡಬೇಕು ಎಂದೆಲ್ಲ ಹೇಳಿದಾಗ ನನಗೆ ಬಹಳ ಭಯವಾಗುತ್ತಿತ್ತು. ಆದರೆ ಅಪ್ಪುಗೆ ಈ ರೀತಿಯ ಸಾಹಸ, ಕಾಡು ಎಲ್ಲವೂ ಇಷ್ಟ, ಅವರೇ ಧೈರ್ಯ ಹೇಳುತ್ತಿದ್ದರು ಹಾಗೂ ಬಹಳ ಉತ್ಸಾಹದಿಂದ ಇದ್ದರು ಹಾಗಾಗಿ ನಾನು ಒಪ್ಪಿಕೊಂಡೆ. ಪ್ರತಿಬಾರಿ ಎಪಿಸೋಡ್ ಶೂಟ್ ಮುಗಿದ ಕೂಡಲೇ ನನಗೆ ಕಾಲ್ ಮಾಡಿ ಅಲ್ಲಿ ಏನಾಯಿತು ಹೇಗಾಯಿತು ಎಂದು ಉತ್ಸಾಹದಿಂದ ವಿವರಿಸುತ್ತಿದ್ದರು” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

