‘ಗಂಧದ ಗುಡಿ’ ಅಮೋಘ ಪ್ರತಿಕ್ರಿಯೆ ಸಿಕ್ಕಿದೆ. ನೂರಾರು ‘ಅಭಿ’ಮಾನಿಗಳು ‘ಪರಮ್ಮಾತ’ನ ಹಬ್ಬವನ್ನು ಜೋರಾಗಿಯೇ ಮಾಡಿದ್ದಾರೆ.
ಅಪ್ಪು ಅವರ ಪತ್ನಿ ಅಶ್ವಿನಿ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿದ್ದರು. ರಾಘವೇಂದ್ರ ರಾಜ್ ಕುಮಾರ್ ,ಶಿವರಾಜ್ ಕುಮಾರ್, ದೇವರಾಜ್, ಅಜೇಯ್ ರಾವ್, ರಮ್ಯಾ, ಮಾಲಾಶ್ರೀ ಅವರು ಅಪ್ಪು ‘ಗಂಧದ ಗುಡಿ’ಯ ಮಾತುಗಳನ್ನಾಡಿದ್ದರು.
ಪ್ರೇಕ್ಷಕರು ಅಪ್ಪು ಅವರನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಿ, ಹತ್ತಾರು ಅಭಿಮಾನಿಗಳು ಭಾವುಕರಾಗಿದ್ದಾರೆ. ಥಿಯೇಟರ್ ಮುಂದೆ ಕಟೌಟ್ ತಮಟೆ ಸದ್ದಿಗೆ ಅಪ್ಪು ಅವರನ್ನು ನೆನೆದು ಫ್ಯಾನ್ಸ್ ಗಳು ಕುಣಿದಾಡಿದ್ದಾರೆ.
ಚಾಲೇಜಿಂಗ್ ಸ್ಟಾರ್ ದರ್ಶನ್ ಅವರು ‘ಗಂಧದ ಗುಡಿ’ಗೆ ಶುಭಕೋರಿ, ಪುನೀತ್ ರಾಜ್‍ಕುಮಾರ್ ಅವರಿಗಾಗಿ ಸಾಕ್ಷಿ ಆಗುವ ಸಮಯ ಬಂದಿದೆ. ‘ಗಂಧದ ಗುಡಿ’ ಸಿನಿಮಾವಲ್ಲ ಇದೊಂದು ಅನುಭವ, ಇಡೀ ತಂಡಕ್ಕೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ.

