ಅಪ್ಪು ಅವರ ಹಿರಿಯ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸಿನಿಮಾವನ್ನು ನೋಡಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಸಂತಸ, ಸಡಗರ, ಸಂಭ್ರಮವನ್ನು ನೋಡಿ ನಟ ರಾಘಣ್ಣ ಮಾತಾನಾಡಿದ್ದಾರೆ.
ಗಂಧದ ಗುಡಿ ಒಂದು ಅದ್ಭುತ ಅನುಭವ.
ನಾವ್ಯಾರು ಯಾರು ಉಳಿಯಲ್ಲ ಆದ್ರೆ ಈ ಸಿನಿಮಾ ಉಳಿಯುತ್ತದೆ. ಅಪ್ಪು ನಮಗೆ ಈ ಸಂದೇಶ ಕೊಡಲು ಬಂದಿದ್ನಾ. ಗಂಧದ ಗುಡಿ ಬೆಸ್ಟ್. ನನ್ನ ತಮ್ಮ ಅಂದ್ರೆ ನನಗೆ ಗಂಧದ ಗುಡಿಯೇ ನೆನಪಾಗುತ್ತದೆ. ನಮ್ಮ ತಂದೆ ಮಾಡದ ಕೆಲಸವನ್ನು ಅಪ್ಪು ಮಾಡಿ ಹೋಗಿದ್ದಾನೆ. ಇದು ಒಂದು ಸಿನಿಮಾವಲ್ಲ ಇದೊಂದು ಅನುಭವ. ಇನ್ಮೇಲೆ ಜನರಿಗೆ ಈ ಕೆಲಸವನ್ನು ತಲುಪಿಸಬೇಕು ಎಂದರು.

