ಇಂದು ಎಲ್ಲೆಡೆ ‘ಗಂಧದ ಗುಡಿ’ಯ ಹಬ್ಬ ಶುರುವಾಗಿದೆ. ನೂರಾರು ಅಭಿಮಾನಿಗಳು
ಥಿಯೇಟರ್ ಮುಂದೆ ಹಬ್ಬದ ವಾತಾವರಣ ಮನೆ ಮಾಡಿದೆ.
ಅಪ್ಪು ಪರವಾಗಿ ಅಪ್ಪು ಪತ್ನಿ ಅಶ್ವಿನಿ ಅವರು ಚಾಮುಂಡೇಶ್ವರಿ ಬೆಟ್ಟ ಹಾಗೂ ನಿಮಿಷಾಂಬ ದೇವಸ್ಥಾನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಟ ಶಿವರಾಜ್ ಕುಮಾರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬೇರೆ ಪಿಕ್ಚರ್ ನೋಡೋಕೂ ಇದನ್ನು ನೋಡೋಕೆ ವ್ಯತ್ಯಾಸವಿದೆ. ‘ಗಂಧದ ಗುಡಿ’ ಯಲ್ಲಿ ಅಪ್ಪುವನ್ನು ನೋಡುವಾಗ ನೋವಾಗುತ್ತದೆ. ಪ್ರಕೃತಿಯ ಬಗ್ಗೆ ಗಂಧದಗುಡಿಯಲ್ಲಿ ಅಪ್ಪಾಜಿ ತಿಳಿಸಿದ್ರು. ಅದರಿಂದ ಅದೆಷ್ಟೋ ಜನ ಪ್ರೇರಣೆಯಾಗಿದ್ರು, ನನ್ನ ಅದೃಷ್ಟ ನಾನು ಗಂಧದಗುಡಿ ಪಾರ್ಟ್ 2 ಮಾಡಿದ್ದೆ. ಇಂದು ಅತಿವೃಷ್ಠಿ ಆಗ್ತಿದೆ. ಪ್ರಕೃತಿಯಲ್ಲಿ ಏರೇಪೇರು ಆಗುತ್ತಿದೆ ಎಂದರು.
ಅಪ್ಪು ಕಾಡಿನ ಬಗ್ಗೆ ಇದರಲ್ಲಿ ಹೇಳಿದ್ದಾರೆ.
ಅಭಿಮಾನಿಗಳು ಅಪ್ಪುವನ್ನು ನೋಡಲು ಬರಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಇದು ಅಪ್ಪು ಅವರ ಕೊನೆಯ ಚಿತ್ರವಲ್ಲ. ಇದು ಆರಂಭ. ಅಪ್ಪು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ ಎಂದು ಭಾವುಕರಾದರು.

