ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಉಳಿದಿದೆ. ಎಲ್ಲಾ ತಂಡಗಳು ಭರ್ಜರಿ ಸಿದ್ಧತೆಯಲ್ಲಿವೆ.
ಈ ಮಧ್ಯ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ವಿಶ್ವಕಪ್ ಟೂರ್ನಿ ಗೆಲ್ಲಬೇಕಾದರೆ ಏನು ಯಾರನ್ನು ಸೋಲಿಸಬೇಕೆಂದಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಟಿ -20 ವಿಶ್ವಕಪ್ ಗೆಲ್ಲಬೇಕಾದರೆ, ಟೀಮ್ ಇಂಡಿಯಾ ಮೊದಲ ಆಸ್ಟ್ರೇಲಿಯಾದ ವಿರುದ್ದ ಗೆಲ್ಲಬೇಕು. ಕಾಂಗರೂ ಗೆದ್ದರೆ ಮಾತ್ರ ಟಿ-20 ಗೆಲ್ಲಬಹುದೆಂದು ಹೇಳಿದ್ದಾರೆ.
2007ರ ಟಿ20 ವಿಶ್ವಕಪ್ ನೋಡಿ, ನಾವು ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದ್ದೆವು. 2011ರ ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ವಿರುದ್ಧ ಜಯಿಸಿದ್ದೆವು. ಆಸ್ಟ್ರೇಲಿಯಾ ತಂಡವು ಅತ್ಯಂತ ಕಠಿಣ ತಂಡಗಳಲ್ಲಿ ಒಂದಾಗಿದ್ದು, ಅವರ ವಿರುದ್ದ ಗೆದ್ದರೆ ಮಾತ್ರ ಟಿ- 20 ವಿಶ್ವಕಪ್ ಗೆಲ್ಲಬಹುದು ಎಂದರು.
ಸೆ.20 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್ ಗೂ ಸಿದ್ದತೆಯಂತೆ ಮೂರು ಪಂದ್ಯಗಳ ಸರಣಿ ಆಡಲಿದೆ.

