HomeNewsಅಪ್ಪು 'ಗಂಧದ ಗುಡಿ'ಗೆ 100 ದಿನದ ಸಂಭ್ರಮ : ಸ್ಪೆಷಲ್ ಪೋಸ್ಟ್ ಹಂಚಿಕೊಂಡ ಪತ್ನಿ

ಅಪ್ಪು ‘ಗಂಧದ ಗುಡಿ’ಗೆ 100 ದಿನದ ಸಂಭ್ರಮ : ಸ್ಪೆಷಲ್ ಪೋಸ್ಟ್ ಹಂಚಿಕೊಂಡ ಪತ್ನಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸಿನ ‘ಗಂಧದ ಗುಡಿ’ ಬಿಡುಗಡೆ ಆಗಿ 100 ದಿನಗಳು ಸಂದಿವೆ. ಅಕ್ಟೋಬರ್‌ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. 

ಸಾಕ್ಷ್ಯ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರ ಮಂದಿರ, ಪಿವಿಆರ್ ಗಳ ಹೌಸ್ ಫುಲ್ ಆಗಿತ್ತು. ರಾಜರತ್ನನನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಿ ಕಣ್ಣೀರು ಅನೇಕರು ಸುರಿಸಿದ್ದರು.

ಕರ್ನಾಟಕ ವನ್ಯಜೀವಿ ಸಂಪತ್ತನ್ನು ತೋರಿಸಿದ ‘ಗಂಧದ ಗುಡಿ’ಯಲ್ಲಿ ಅಪ್ಪು ಜೀವಿಸಿದ್ದರು. ವಿದ್ಯಾರ್ಥಿಗಳು, ಯುವ ಜನರು ಸೇರಿದಂತೆ ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ‘ಗಂಧದ ಗುಡಿ’ ಸೆಳೆದಿತ್ತು.

ಈ ಅದ್ಭುತ ಜರ್ನಿ 100 ದಿನಗಳು ಕಳೆದಿವೆ.‌ಈ ಸಂಭ್ರಮವನ್ನು ಅಭಿಮಾನಿಗಳು ಸಂತಸದಿಂದ ಆಚರಿಸಿಕೊಂಡು ಅಪ್ಪು ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ.

ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿರುವ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ 100 ಕಳೆದ ಕ್ಷಣವನ್ನು ಸಣ್ಣ ಕ್ಲಿಪಿಂಗ್ ವೊಂದನ್ನು ಹಾಕಿ 100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ! ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಬರೆದುಕೊಂಡಿದ್ದಾರೆ. ಅಪ್ಪು ಅವರ ಕನಸಿನ ಪಯಣವಾಗಿದ್ದ ಈ ಚಿತ್ರವು, ಕರ್ನಾಟಕದ ಅದ್ಭುತ ಕಾಡು ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ ಎಂದು ಬರೆದಿದ್ದಾರೆ.

ಸಾಕ್ಷ್ಯ ಚಿತ್ರದ ಓಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಖರೀದಿಸಿದೆ. ಆದರೆ ಇದುವರೆಗೆ ಯಾವಾಗ ಸ್ಟ್ರೀಮ್ ಆಗುತ್ತದೆ ಎನ್ನುವುದರ ಮಾಹಿತಿ ಇದುವರೆಗೆ ರಿವೀಲ್ ಆಗಿಲ್ಲ.

RELATED ARTICLES

Most Popular

Share via
Copy link
Powered by Social Snap