HomeExclusive News"ಗಂಧದ ಗುಡಿ" ಮೇಕಿಂಗ್ ವಿಡಿಯೋ ಔಟ್: ಹ್ಯಾಪಿ ಮೂಡ್ ನಲ್ಲಿದ್ರು ಅಪ್ಪು

“ಗಂಧದ ಗುಡಿ” ಮೇಕಿಂಗ್ ವಿಡಿಯೋ ಔಟ್: ಹ್ಯಾಪಿ ಮೂಡ್ ನಲ್ಲಿದ್ರು ಅಪ್ಪು

ಅಪ್ಪು ಅವರ “ಗಂಧದ ಗುಡಿ” ಸಾವಿರಾರು ಜನರು ಕಾಯುತ್ತಿದ್ದಾರೆ. ಅದು ಅವರ ಕನಸಿನ ಪ್ರಾಜೆಕ್ಟ್. ಅಪ್ಪು ಅವರನ್ನು ಮರೆತು ಹೋದ ದಿನಗಳೇ ಇಲ್ಲ. ವನ್ಯಜೀವಿ ಜಗತ್ತಿನ ವೈವಿಧ್ಯಮಯ ದೃಶ್ಯವನ್ನು ಗಂಧದ ಗುಡಿಯಲ್ಲಿ ತೋರಿಸಲಾಗಿದೆ. ಈಗಾಗಲೇ ಟೀಸರ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


ಗಂಧದ ಗುಡಿ ಚಿತ್ರೀಕರಣದ ವೇಳೆ ಅಪ್ಪು ತಂಡದವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು, ತಮಾಷೆ ಕ್ಷಣದ ಮೇಕಿಂಗ್‌ ವಿಡಿಯೋ ರಿಲೀಸ್‌ ಆಗಿದೆ.


ಚಿತ್ರೀಕರಣದ ವೇಳೆ ಅಪ್ಪು ಖುಷಿ ಖುಷಿಯಾಗಿ ಟೈಮ್‌ ಪಾಸ್‌ ಮಾಡಿದ್ದಾರೆ. ತಂಡದ ಸದಸ್ಯರೊಬ್ಬರು ಜಗ್ಗೇಶ್ ಸಿನಿಮಾಗಳ ಸನ್ನಿವೇಶಗಳನ್ನು ಅಭಿನಯಿಸಿ ತೋರಿಸುತ್ತಿದ್ದು, ಅದನ್ನು ನೋಡಿ ಎಂಜಾಯ್ ಮಾಡುತ್ತಾ ಪುನೀತ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ನಂತರ ತಾವು ಕೂಡ ಅದನ್ನು ಮಾಡಿ ತೋರಿಸಿದ್ದಾರೆ. ಈ ವಿಡಿಯೋದಲ್ಲಿ ಅಪ್ಪು ನಗುಮುಖದಿಂದ ಇರುವುದನ್ನು ನೋಡಿ ಫ್ಯಾನ್ಸ್‌ ಫುಲ್‌ ಖುಷಿಯೊಂದಿಗೆ ಕಣ್ಣಂಚು ಒದ್ದೆಯಾಗಿದೆ.
ಸದ್ಯ ಗಂಧದ ಗುಡಿ ಮೇಕಿಂಗ್‌ ವಿಡಿಯೋ ಫುಲ್‌ ವೈರಲ್‌ ಆಗಿದೆ.


ಅಪ್ಪು ನಾಯಕನಾಗಿ ನಟಿಸಿದ್ದ ʼಜೇಮ್ಸ್‌ʼ ಹಾಗೂ ದೇವರಾಗಿ ಕಾಣಿಸಿಕೊಂಡಿದ್ದ “ಲಕ್ಕಿಮ್ಯಾನ್” ಎರಡೂ ಚಿತ್ರವೂ ಸೂಪರ್‌ ಹಿಟ್‌ ಆಗಿವೆ. ಆದರೆ ಅಪ್ಪು ನಮ್ಮೊಂದುಗೆ ಇಲ್ಲ ಅನ್ನೋ ಬೇಸರ ಮಾತ್ರ ಹಾಗೆಯೇ ಉಳಿದಿದೆ.

RELATED ARTICLES

Most Popular

Share via
Copy link
Powered by Social Snap