HomeNewsರಾಜವರ್ಧನ್ 'ಗಜರಾಮ'ನಿಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

ರಾಜವರ್ಧನ್ ‘ಗಜರಾಮ’ನಿಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

ರಿಷಭ್ ಶೆಟ್ಟಿ ಅವರ ‘ಹರಿಕಥೆಯಲ್ಲ ಗಿರಿಕಥೆ’ ಸಿನಿಮಾದ ಮೂಲಕ ಬಣ್ಣದ ‌ಲೋಕಕ್ಕೆ ಕಾಲಿಟ್ಟ ತಪಸ್ವಿನಿ‌ ಪೂಣಚ್ಚ ಈಗ ತಮ್ಮ ಎರಡನೇ ಚಿತ್ರಕ್ಕೆ ಸಜ್ಜಾಗಿದ್ದಾರೆ.


‘ಬಿಚ್ಚುಗತ್ತಿ’ ಸಿನಿಮಾದಲ್ಲಿ ಜಬರ್ ದಸ್ತ್ ಹಾಗೂ ನಟನೆಯ‌ ಮೂಲಕ‌ ಗಮನ ಸೆಳೆದಿದ್ದ ನಟ ರಾಜವರ್ಧನ್ ಈಗ ‘ಗಜರಾಮ’ನ ಅವತಾರವೆತ್ತಲಿದ್ದು, ಈ ಚಿತ್ರದ ನಾಯಕಿಯಾಗಿ ತಪಸ್ವಿನಿ ಕಾಣಿಸಿಕೊಳ್ಳಲಿದ್ದಾರೆ.


ಈ ಹಿಂದೆ ಯೋಗರಾಜ್ ಭಟ್, ಸೂರಿಯಂಥ ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿದ ಸುನೀಲ್ ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.



‘ಗಜರಾಮ’ನ ಪೋಸ್ಟರ್ ರಿಲೀಸ್ ಆಗಿದ್ದು, ರಾಜವರ್ಧನ್ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.



ಶಿಷ್ಯ ದೀಪಕ್, ಶರತ್ ಲೋಹಿತಾಶ್ವ, ಶೋಭರಾಜ್ ಮುಂತಾದವರು ಅಭಿನಯಿಸಲಿದ್ದಾರೆ.


ಈ ಸಿನಿಮಾಗೆ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದಾರೆ.


ಈ ತಿಂಗಳ ಕೊನೆಯಲ್ಲಿ ಚಿತ್ರ ಸಟ್ಟೇರುವ ಸಾಧ್ಯತೆಯಿದೆ.

RELATED ARTICLES

Most Popular

Share via
Copy link
Powered by Social Snap