ಯೋಗರಾಜ್ ಭಟ್ – ಗಣಿ ಕಾಂಬಿನೇಷನ್ ಮತ್ತೊಮ್ಮೆ ಮೂಡಿ ಮಾಡಿದೆ.
ಕಳೆದ ವಾರ ತೆರೆಕಂಡ ‘ಗಾಳಿಪಟ -2’ ಕ್ರೇಜ್ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಚಿತ್ರಕ್ಕೆ ರಾಜ್ಯಾದ್ಯಂತ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ.




ಗಣೇಶ್, ದಿಗಂತ್ , ಪವನ್ ಕುಮಾರ್ ನಾಯಕರಾಗಿರುವ ಸಿನಿಮಾದಲ್ಲಿ ಅನಂತ್ ನಾಗ್ ಕಿಶೋರ್ ಎಂಬ ಮೇಸ್ಟ್ರ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಆ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ಗುರು – ಶಿಷ್ಯರ ಭಾವಯಾನದ ನಡುವೆ ಸಾಗುವ ಕಥೆಯಲ್ಲಿ, ಪ್ರೇಮ ಕಥೆಯೂ ಇದೆ. ಹಾಸ್ಯ ಹಾಗೂ ಹಾಡುಗಳು ಎಂದಿನಂತೆ ಯೋಗರಾಜ್ ಭಟ್ ಮ್ಯಾಜಿಕ್. ನಾಯಕಿಯರ ಪಾತ್ರ, ರಂಗಾಯಣ ರಘು ಲುಕ್,ಅರ್ಜುನ್ ಜನ್ಯ ಮ್ಯೂಸಿಕ್ ಚಿತ್ರವನ ಗೆಲ್ಲಿಸಿದೆ.
ಚಿತ್ರವನ್ನು ಪ್ರೇಕ್ಷಕರು ಮೆಚ್ಚುತ್ತಿದ್ದಾರೆ. ವೀಕೆಂಡ್ ,ವೀಕ್ ಡೇಸ್ ನಲ್ಲೂ ಟಿಕೆಟ್ ಭರ್ಜರಿ ಮಾರಾಟವಾಗಿದೆ.
ಚಿತ್ರದ ಸಕ್ಸಸ್ ಬಳಿ ಗಣಿ ಹಾಗೂ ಯೋಗರಾಜ್ ಭಟ್ ಥಿಯೇಟರ್ ಗೆ ಪ್ರೇಕ್ಷಕರು ಧನ್ಯವಾದ ಸಲ್ಲಿಸುತ್ತಿದ್ದಾರೆ.







